ನೆತ್ತರಕೆರೆ :ನವೋದಯ ಮಿತ್ರ ಕಲಾ ವೃಂದ (ರಿ)ಅಶ್ರಯದಲ್ಲಿ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭ.
ರಕ್ತದಾನದ ಮೂಲಕ ರಾಷ್ಟ ನಿರ್ಮಾಣದ ಕಾರ್ಯ : ಬಾಲಕೃಷ್ಣ ಕುಮಾರ.
ಬಂಟ್ವಾಳ : ರಕ್ತದಾನವು ಶ್ರೇಷ್ಠ ದಾನವಾಗಿದೆ ಮತ್ತೊಬ್ಬರ ಜೀವ ಉಳಿಸುವ ಮೂಲಕ ಪುಣ್ಯದ ಕಾರ್ಯವು ಆಗಿದೆ, ರಕ್ತದಾನದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ನವೋದಯ ಸಂಸ್ಥೆಯು ತೊಡಗಿರುವುದು ಶ್ಲಾಘನೀಯ ಎಂದು ಆರ್ ಎಸ್ ಎಸ್ ಬಂಟ್ವಾಳ ತಾಲೂಕು ಮಾನ್ಯ ಸಂಘ ಚಾಲಕರಾದ ಬಾಲಕೃಷ್ಣ ಕುಮಾರ ಹೇಳಿದರು.
ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ,ನವೋದಯ ಮಿತ್ರ ಕಲಾ ವೃಂದ (ರಿ) ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ತರಕೆರೆ ಇದರ ಅಶ್ರಯದಲ್ಲಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಜು 30 ರಂದು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸಂಘದ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಯೆನೋಪೋಯ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ಸಹ ಪ್ರಧ್ಯಾಪಕರು ಹಾಗೂ ಆರ್ ಎಸ್ ಎಸ್ ಬಂಟ್ವಾಳ ತಾಲೂಕು ಮಾನ್ಯ ಸಂಘ ಚಾಲಕರಾದ ಬಾಲಕೃಷ್ಣ ಕುಮಾರ ಹಾಗೂ ಮುಖ್ಯ ಅತಿಥಿ ಕೆ ಎಂ ಸಿ ಆಸ್ಪತ್ರೆ ಮಂಗಳೂರು ಇದರ ವೈದ್ಯಧಿಕಾರಿ ಅಖಿಲ್ ಅವರು ರಕ್ತದಾನದ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಟ್ಟು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ನವೋದಯ ಮಿತ್ರ ಕಲಾ ವೃಂದದ ಅಧ್ಯಕ್ಷ ಸಂತೋಷ್ ಕುಮಾರ್ ಹಾಗೂ ನೇತ್ರಾವತಿ ಮಾತೃ ಮಂಡಳಿಯ ಅದ್ಯೆಕ್ಷೆ ಮಾಲತಿ ಚಂದ್ರಹಾಸ, ಪುದು ಗ್ರಾ ಪಂ ಸದಸ್ಯರಾದ ಪಿ ಸುಬ್ರಮಣ್ಯ ರಾವ್, ಪದ್ಮನಾಭ ಶೆಟ್ಟಿ ಪುಂಚಮೆ, ಕಳ್ಳಿಗೆ ಗ್ರಾ ಪಂ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಹಿಂ ಜಾ ವೇ ಜಿಲ್ಲಾಧ್ಯಕ್ಷ ಜಗದೀಶ ಬಂಗೇರ, ಭಾಸ್ಕರ್ ಎನ್ , ಚಂದ್ರಹಾಸ ಎನ್, ವಿಶ್ವನಾಥ್ ಕುಲಾಲ್, ಜಗದೀಶ್ ಎನ್, ರವೀಂದ್ರ, ಉಮೇಶ್ ಎನ್, ಶ್ರೀಧರ್ ಹೆಚ್, ಲೋಕೇಶ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ, ಧನ್ಯವಾದವಿತ್ತು ಕಾರ್ಯಕ್ರಮ ನಿರೂಪಿಸಿದರು. ಸುಮಾರು 73 ಜನ ರಕ್ತದಾನವನ್ನು ಮಾಡಿ ಸೇವಾ ಕಾರ್ಯದಲ್ಲಿ ಭಾಗಿಯಾದರು.