ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ಜಿಲ್ಲಾ ಸಮಿತಿ ಮುಖಂಡರ ಅಸಮಾಧಾನ
`ಹರಿಪ್ರಸಾದ್‌ಗೆ ಅನ್ಯಾಯ ಸಹಿಸೆವು’
ಮಂಗಳೂರು: ಅತಿ ಹಿಂದುಳಿದ ವರ್ಗದ ನಾಯಕರಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಅವರಿಗೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವಲ್ಲಿ ಹರಿಪ್ರಸಾದ್ ಪಾತ್ರ ಸಾಕಷ್ಟಿದೆ. ಅವರ ಹಿರಿತನ ಕಡೆಗಣಿಸಿದರೆ ಬಿಲ್ಲವ ಸಮುದಾಯ ಸಹಿಸವುದಿಲ್ಲ ಎಂದು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ(ಮಂಗಳೂರು) ಇದರ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಎಚ್ಚರಿಸಿದರು.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಜು. ೨೩೯ರಂದು ಮಂಗಳೂರು ಸಮಿತಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಲ್ಲವ ಮತ್ತು ಈಡಿಗ ಸಮುದಾಯದಲ್ಲಿ ಜನಾರ್ದನ ಪೂಜಾರಿ ಮತ್ತು ಎಸ್. ಬಂಗಾರಪ್ಪ ನಂತರದಲ್ಲಿ ಹರಿಪ್ರಸಾದ್ ರಾಷ್ಟç ಮಟ್ಟದ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಅಂತಹ ಮಹಾನ್ ನಾಯಕನಿಗೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ. ಮೊದಲ ಸಂಪುಟದಲ್ಲೇ ಅವರಿಗೆ ಆದ್ಯತೆ ಸಿಗಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹರಿಪ್ರಸಾದ್ ಅವರಿಗೆ ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದರು.

ಹೊಸದಾಗಿ ಘೋಷಿಸಲಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಸಿದ್ದರಾಮಯ್ಯ ಇನ್ನೂ ಹಣ ಮಂಜೂರಾತಿ ಪ್ರಸ್ತಾವಿಸಿಲ್ಲ ಎಂದವರು, ಸೆಪ್ಟೆಂಬರ್ ೯ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅತಿ ಹಿಂದುಳಿದ ವರ್ಗಗಳ(ಎಂಬಿಸಿ ಮೋಸ್ಟ್ ಬ್ಯಾಕ್‌ವರ್ಡ್ ಕ್ಲಾಸ್) ವಿಷಯದಲ್ಲಿ ಪೂರ್ವಭಾವಿ ಚಿಂತನಾ ಸಭೆ ನಡೆಯಲಿದೆ. ಸಮುದಾಯದ ಡಾ. ಶ್ರೀ. ಪ್ರಣವಾನಂದ ಸ್ವಾಮಿ ಅವರ ನೇತೃತ್ವದಲ್ಲಿ ನಡೆಯುವ ಈ ಚಿಂತನಾ ಸಮಾವೇಶದಲ್ಲಿ ಸಮುದಾಯದ ರಾಷ್ಟ್ರೀಯ ನಾಯಕರಾದ ಸಚಿವ ಶ್ರೀಪಾದ ಎಸ್ಸೊ ನಾಯಕ್, ತೆಲಂಗಾಣದ ಸಚಿವ ಶ್ರೀನಿವಾಸ ಗೌಡ್, ಆಂಧ್ರದ ಸಚಿವ ಜೋಗಿ ರಮೇಶ್, ಕೇರಳದ ಸಚಿವ ಎ. ಕೆ. ಶಶೀಂದ್ರನ್, ಚೈನ್ನೆÊಯ ತಿರುಚೆಂಡೂರಿನ ಅನಿತಾ ರಾಧಾಕೃಷ್ಣನ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಸುರೇಶ್ಚಂದ್ರ ಕೋಟ್ಯಾನ್, ಉಪಾಧ್ಯಕ್ಷ ಪ್ರೇಮನಾಥ, ಕೋಶಾಧಿಕಾರಿ ಲೋಕನಾಥ ಪೂಜಾರಿ, ಮಹಿಳಾ ಕಾರ್ಯದರ್ಶಿ ಶೋಭಾ ಕೇಶವ್ ಮತ್ತು ಸಂಘಟನಾ ಕಾರ್ಯದರ್ಶಿ ಸುರೇಶ್ ಪೂಜಾರಿ ಉಪಸ್ಥಿತರಿದ್ದರು.