ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾಗಿ ಹರೀಶ್ ರೈ ಉಪಾಧ್ಯಕ್ಷರಾಗಿ ಉದಯ ಬಂಗೇರಾ ಆಯ್ಕೆ
ಮಂಗಳೂರು: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ (ರಿ )ಮಂಗಳೂರು ಕ್ಷೇತ್ರ ಸಮಿತಿಯ ವತಿಯಿಂದ ವಾರ್ಷಿಕ ಮಹಾ ಸಭೆ ಹಾಗೂ ಅಟಿದ ನೆಂಪು ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ 2023-24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಟೈಲರ್ಸ್ ಅಸೋಸಿಯೇಶನ್ ಮಂಗಳೂರು ಕ್ಷೇತ್ರದ ನೂತನ ಅಧ್ಯಕ್ಷರಾಗಿ ಹರೀಶ್ ರೈ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಉದಯ ಬಂಗೇರಾ , ಪ್ರ.ಕಾರ್ಯದರ್ಶಿಯಾಗಿ ಪ್ರೇಮಲತಾ ಶೆಟ್ಟಿ ,ಕೋಶಾಧಿಕಾರಿಯಾಗಿ ಶಶಿಧರ ಬಂಗೇರಾ ಮಲ್ಲೂರು ಹಾಗೂ ಕಾರ್ಯಕಾರಿ ಸಮಿತಿಗಳನ್ನು ರಚಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಕ್ಷೇತ್ರ ಸಮಿತಿ ವಿದ್ಯಾ ಶೆಟ್ಟಿ, ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ, ರಾಜ್ಯ ಸಮಿತಿಪ್ರ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ರಾಜ್ಯ ಸಮಿತಿ ಕೊಶಾಧಿಕಾರಿ ರಾಮಚಂದ್ರ ,ರಾಜ್ಯ ಸಮಿತಿ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ಜಲ್ಲಾಧ್ಯಕ್ಷ ಜಯಂತ ಉರ್ಲಾಂಡಿ,ಕೋಶಾಧಿಕಾರಿ ಈಶ್ವರ್ ಕುಲಾಲ್,ಕೆ. ಲಿಗೋಧರ್ ಆಚಾರ್ಯ ,ಉಮಾವತಿ, ಶಶಿಕಲಾ ಮತ್ತಿತರರು ಇದ್ದರು.