ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮ
ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಸುವರ್ಣ ರೆಸಿಡೆನ್ಸಿ ಓನರ್ಸ್ ಅಪಾರ್ಟ್ಮೆಂಟ್ ಇದರ ಜಂಟಿ ಆಶ್ರಯದಲ್ಲಿ ಜು. 30 ರಂದು ಭಾನುವಾರ ಸುವರ್ಣ ರೆಸಿಡೆನ್ಸಿಯಲ್ಲಿ ಆಟಿ ದೊಂಜಿ ದಿನ ಕಾರ್ಯಕ್ರಮ ನಡೆಯಿತು. ಇದರ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ತುಳು ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್ ನೆರವೇರಿಸಿ ಆಟಿ ತಿಂಗಳ ವೈಶಿಷ್ಟತೆಯನ್ನು ಅದರ ಪ್ರಾಮುಖ್ಯತೆಯನ್ನು ವಿವರಿಸಿ ನಮ್ಮ ತುಳುನಾಡ ಸಂಸ್ಕೃತಿಯಲ್ಲಿ ಇರುವ ಪ್ರಾಮುಖ್ಯತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಕೋಟಿಯನ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ವತಿಯಿಂದ ನಡೆಯುವ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.
ಸುವರ್ಣ ರೆಸಿಡೆನ್ಸಿ ಯ ಶೇಷಾಸನ್ನ ಚೌಟ, ಶ್ರೀಮತಿ ಸ್ಮಿತಾ ಹಾಗೂ ವಿನಯವರು ಉಪಸ್ಥಿತಿ ಇದ್ದರು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಟ್ರಸ್ಟಿಗಳಾದ ಕಲ್ಪನಾ, ಲಕ್ಷ್ಮೀಶ ಹಾಗೂ ಪದಾಧಿಕಾರಿಗಳಾದ ಮಹೇಶ ಅಮೀನ್, ಅಕ್ಷತ ಕದ್ರಿ, ರಾಮ್ ಪ್ರಸಾದ್ ಉಪಸ್ಥಿದ್ದರು ತದನಂತರ ಆಟಿದ ಊಟವನ್ನು ಎಲ್ಲರೂ ಸವಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ರಸಮಂಜರಿ ನಡೆಯಿತು.
ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ನ ಪ್ರಕಾಶ್ ಕೋಟಿಯನ್ ಸ್ವಾಗತಿಸಿ ಟ್ರಸ್ಟಿ ಶೈನೀ ವಂದಿಸಿದರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.