ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿದಾಗ ಜೀವನದಲ್ಲಿ ಸಾರ್ಥಕ್ಯ : ಶ್ರೀ ಈಶಪ್ರಿಯತೀರ್ಥ ಶ್ರೀಪಾದರು
ಉಳ್ಳಾಲ: ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿ ಮುಂದುವರಿದಾಗ ಮಾತ್ರ ಜೀವನದಲ್ಲಿ ಸಾರ್ಥಕ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಉಡುಪಿ ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ನುಡಿದರು.

ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಮಣಿಪುರ ಗ್ರಾಮದಲ್ಲಿರುವ ಅದಮಾರು ಶಾಖಾ ಮಠದಲ್ಲಿ ಚಾರ್ತುಮಾಸ ವೃತಾಚರಣೆಯಲ್ಲಿರುವ ಶ್ರೀಗಳನ್ನು ಭೇಟಿಯಾದ ಮಂಗಳೂರು ಗಾಳದ ಕೊಂಕಣಿ ಸಮಾಜ ಬಾಂಧವರಿಗೆ ಆಶೀರ್ವಚನಗೈದರು.

ಗಾಳದಕೊಂಕಣಿ ಸಮಾಜ ನಾಯಕತ್ವದಗುಣ, ಮೌಲ್ಯಗಳನ್ನು ಬೆಳಸಿಕೊಳ್ಳುವ ದೆಸೆಯಲ್ಲಿ ಪ್ರಯತ್ನಶೀಲರಾಗಬೇಕು ಎಂದ ಶ್ರೀಗಳು ನಿಯಮದ ಚೌಕಟ್ಟಿನೊಳಗೆ ನಾವು ಮಾಡುವಂತ ಯಾವುದೇ ಕಾರ್ಯದ ಪ್ರಾಮಾಣಿಕ ಪ್ರಯತ್ನಕ್ಕೆ ದೈವ,ದೇವರ ಸಹಕಾರವು ಸಿಗಲಿದೆ ಎಂದರು.

ಜೀವನದಲ್ಲಿ ಚಲನಶೀಲರಾಗಿದ್ದುಕೊಂಡು ಜ್ಞಾನಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರಂತರ ಅಧ್ಯಯನಶೀಲರಾಗಬೇಕು, ಇತಿಹಾಸದ ಅಧ್ಯಯನದಿಂದ,ಭಗವತ್ ಚಿಂತನೆಯಿಂದ ಅನಂತಕಾಲದ ಅನುಭವವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದ ಶ್ರೀ ಈಶ ಪ್ರಿಯ ಶ್ರೀಪಾದರು ಪ್ರತಿನಿತ್ಯ ಒಂದಷ್ಟು ಹೊತ್ತು ಶ್ರೀಕೃಷ್ಣ ಮಂತ್ರಪಠಣದ ಮೂಲಕ ಸಾರ್ಥಕತೆ ಕಾಣಬೇಕು ಎಂದರು.
ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ,ಪ್ರ.ಕಾರ್ಯದರ್ಶಿ ಮುರಳೀಧರ ನಾಯಕ್,ಶ್ರೀಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ ಗೌರವಾಧ್ಯಕ್ಷ ಯು.ದಯಾನಂದ ನಾಯಕ್ ,ಅಧ್ಯಕ್ಷ ಉಮಾನಾಥ ನಾಯಕ್,ಪ್ರ.ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ,ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಶೀಲ ಯು.ನಾಯಕ್ ,ಶ್ರೀಕ್ಷೇತ್ರ ಸೋಮನಾಥ ಉಳಿಯ ಸೇವಾಸಮಿತಿ ಅಧ್ಯಕ್ಷ ಶಿವಾನಂದ ವಿ. ನಾಯಕ್ ಉಳಿಯ,ಸಮಿತಿ ಪದಾಧಿಕಾರಿಗಳಾದ ಯೋಗೀಶ್ ನಾಯಕ್ ಪಂಪ್ ವೆಲ್,ಮಿಥಿಲೇಶ್ ನಾಯಕ್ ಮಣ್ಣಗುಡ್ಡೆ, ರಂಜನ್ ನಾಯಕ್ ದೇರೆಬೈಲ್ ,ಪ್ರವೀಣ್ ನಾಯಕ್ ,ಆಶಾ ನಾಯಕ್ ಗೋರಿಗುಡ್ಡೆ,ಹೇಮಾ ಕೇಶವ ನಾಯಕ್,ಕೋಡಿ ಜಯನಾಯಕ್,ಡಾ.ಧನಲಕ್ಷ್ಮೀ ಎಂ.ನಾಯಕ್,ಮಹೇಶ್ ಬಂಟ್ವಾಳ,ಮೋಹನ್ ನಾಯಕ್ ಸೋಮೇಶ್ವರ,ಕೋಡಿ ಲಕ್ಷ್ಮಣ್ ನಾಯಕ್,ಶ್ರೀರಿಷ್ ನಾಯಕ್ ಕಾಫಿಕಾಡ್,ಚಂದ್ರಶೇಖರ ನಾಯಕ್ ಬಪ್ಪಾಲ್, ಶಾರದಾ ನಾಯಕ್ ಸೋಮೇಶ್ವರ,ಕವಿತಾ ಎಸ್.ನಾಯಕ್ ಉಳಿಯ,ಉಷಾ ಕಲ್ಲಾಪು,ರಜನಿ ಆರ್ ನಾಯಕ್ ಬಂಟ್ವಾಳ,ರೇಣುಕಾ ಕಲ್ಲಾಪು ಮೊದಲಾದವರಿದ್ದರು.ಇದಕ್ಕು ಮೊದಲು ಅದಮಾರು ಮಠದ ಏರ್ಮಾಳ್ ನಲ್ಲಿರುವ ಮೂಲ ಮಠ,ಉಡುಪಿ ಶ್ರೀಕೃಷ್ಣ ಹಾಗೂ ಅದಮಾರು ಮಠಕ್ಕು ಭೇಟಿ ನೀಡಿ ದೇವರದರ್ಶನ ಹಾಗೂ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.