ಇಂಡಿಯನ್ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಯ ೨೫ ನೆಯ ವಾಷಿ೯ಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ
ಮಂಗಳೂರು: ಇಂಡಿಯನ್ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಯ ೨೫ ನೆಯ ವಾಷಿ೯ಕೋತ್ಸವದ ಅಂಗವಾಗಿ ಜು. ೨೨ ರಂದು “ಬೃಹತ್ ರಕ್ತದಾನ ಶಿಬಿರ” ನಡೆಯಿತು.
ಇಂಡಿಯನ್ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಉಡುಪಿ ಹಾಗೂ ಕುಂದಾಪುರ ಶಾಖೆಯ ವತಿಯಿಂದ ಜು. ೨೨ ರಂದು ರಕ್ತದಾನ ಶಿಬಿರ ವನ್ನು ಉಡುಪಿಯ ಅಜ್ಜರಕಾಡು ಸರಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿತ್ತು.
ಇಂಡಿಯನ್ ಕೋ ಅಪರೇಟಿವ್ ಕ್ರೆಡಿಟ್ ಸೊಸೈಟಿ ಇದರ ಉಡುಪಿ ಹಾಗೂ ಕುಂದಾಪುರ ಶಾಖೆಯ ಪ್ರಬಂಧಕರುಗಳಾದ ಮಹೇಶ್ ಹೆಗ್ಡೆ ಹಾಗೂ ಸುರೇಶ್ ಕುಮಾರ್ ಅವರ ಮುಂದಾಳತ್ವದಲ್ಲಿನಡೆದ ಶಿಬಿರದಲ್ಲಿ ಸುಮಾರು 25 ಜನರು ರಕ್ತದಾನ ಮಾಡಿದರು.
ಸಂಸ್ಥೆಯ ಟಾಪ್ ಮೋಸ್ಟ್ ಸೀನಿಯರ್ಸ್ ಗಳಾದ ವಿನಯ್ ರಜತ್ ಮೀನಾಜೆ ಹಾಗೂ ವಿನೋದ್ ಕುಮಾರ್ ಹಾಗೂ ಉಡುಪಿ, ಮಂಗಳೂರು, ಕುಂದಾಪುರ ವಿಭಾಗದ ಹಿರಿಯ ಹಾಗೂ ಕಿರಿಯ ಸದಸ್ಯರು ಹಾಗೂ ಸಂಸ್ಥೆಯ ಸಿಬ್ಬಂಧಿ ವಗ೯ದವರು ರಕ್ತದಾನ ಮಾಡಿದರು.