ಮಣಿಪುರ ಘಟನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಬಂಟ್ವಾಳ: ಮಣಿಪುರದಲ್ಲಿ ನಡೆದಿರುವ ಪೈಶಾಚಿಕ ಕೃತ್ಯವನ್ನು ಖಂಡಿಸಿ ಹಾಗೂ ಮಣಿಪುರ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತೆ ಹಾಗೂ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಒತ್ತಾಯಿಸಿಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಬಿ. ಸಿ ರೋಡ್ ಮೇಲ್ಸ್ ತುವೆಯ ಕೆಳಭಾಗದಲ್ಲಿ ಬೃಹತ್ ಪ್ರತಿಭಟನೆ ಸೋಮವಾರ ನಡಯಿತು.

ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಮಣಿಪುರದ ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರಕಾರವೇ ಕಾರಣ ಎಂದು ಅರೋಪಿಸಿದರು.ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೆ, ಅಂತಹ ಸರಕಾರಕ್ಕೆ ಆಡಳಿತ ನಡೆಸುವ ಅರ್ಹತೆಯು ಇಲ್ಲ ಎಂದು ಅವರು ಟೀಕಿಸಿದರು.

ಬೇಟಿ ಬಚಾವೋ ಬೇಟಿ ಪಡಾವೋ , ಅಚ್ಚೇದಿನ್ ಬರುತ್ತದೆ ಎಂದು ಹೇಳುವವರಿಗೆ ಈ ಘಟನೆ ಶೋಭೆ ತರುವುದಿಲ್ಲ ಎಂದು ಅವರು ಮಣಿಪುರದಲ್ಲಿ ನಡೆದ ಈ ಘಟನೆಯನ್ನು ಕರ್ನಾಟಕದ ಜನತೆ ಖಂಡಿಸಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅಶ್ವನಿ ಕುಮಾರ್ ರೈ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್ , ಎಂ.ಎಸ್.ಮಹಮ್ಮದ್,ಪಿಯೂಸ್ ಎಲ್.ರೋಡ್ರಿಗಸ್, ಮಹಮ್ಮದ್ ಶರೀಫ್, , ಪರಮೇಶ್ವರ ಮೂಲ್ಯ, ಸುಭಾಶ್ಚಂದ್ರ ಶೆಟ್ಟಿ ,ಅಬ್ಬಾಸ್ ಆಲಿ, ಜೆಸಿಂತ ಡಿ.ಸೋಜ, ಮಲ್ಲಿಕಾ ಶೆಟ್ಟಿ, ಐಡಾ ಸುರೇಶ್, ಜಯಂತಿ ಪೂಜಾರಿ,ವೆಂಕಪ್ಪ ಪೂಜಾರಿ, , ಪ್ಲೋಸಿ ಡಿ.ಸೋಜ, ಪದ್ಮನಾಭ ರೈ, ಸುರೇಶ್ ನಾವೂರ, ಸದಾನಂದ ಶೆಟ್ಟಿ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ನಂದಾವರ ಮತ್ತಿತರಿದ್ದರು.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಬೇಬಿಕುಂದರ್ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ರೈ ವಂದಿಸಿದರು.