ಸ್ಪೀಕರ್ ಗೆ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ರೈತರಿಂದ ಮನವಿ
ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿಗಳಾದ ಮನೋಹರ್ ಶೆಟ್ಟಿ ನಡಿ ಕಂಬಳಗುತ್ತು ಅವರ ನೇತೃತ್ವದ ನಿಯೋಗ ಕರ್ನಾಟಕ ರಾಜ್ಯ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅವರನ್ನು ಮಂಗಳೂರಿನ ಸರ್ಕ್ಯೂಟ್ ಹೌಸಿನಲ್ಲಿ ಶನಿವಾರ ಭೇಟಿಯಾಗಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಲಿಖಿತ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ಬಂಟ್ವಾಳ ತಾಲೂಕು ರೈತ ಸಂಘದ ಅಧ್ಯಕ್ಷ ಎಮ್. ಸುಬ್ರಮಣ್ಯ ಭಟ್ ಕಾರ್ಯದರ್ಶಿ ಕೆ.ಇದ್ದಿನಬ್ಬ,ಭಾಸ್ಕರ, ಮೊಯಿದಿನಬ್ಬ ,ಲೋಕಯ್ಯ ,ದಿಲೀಪ್ ರೈ, ಸವಿತಾ,ದೇವಕಿ, ಪುರುಷೋತ್ತಮ, ಗಂಗಾಧರ ಮೊದಲಾದವರಿದ್ದರು.ತುಂಬೆ ಡ್ಯಾಮ್ ನಿರ್ಮಾಣದಿಂದ ಸವಕಳಿ ಪ್ರದೇಶಕ್ಕೆ ನ್ಯಾಯಯಿತವಾದ ಪರಿಹಾರ,ವರತೆ ಪ್ರದೇಶಕ್ಕೆ ಪರಿಹಾರ, ನದೀತೀರದ ಪಂಪ್ ಸೆಟ್ಟ್ ಗಳ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ ಆದೇಶ ರದ್ದತಿ, ಕುಮ್ಕಿ ಹಕ್ಕಿನ ಕುರಿತ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.