ವಿವಿದೆಡೆಯಲ್ಲಿ ಸ್ವಚ್ಚತಾ ಕಾರ್ಯ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡದಿಂದ ಸ್ವಚ್ಛತಾ ಕಾರ್ಯ ನಡೆಸಿದರು.

ಕಲ್ಲಡ್ಕಯೋಜನಾ ಕಚೇರಿ, ಕಲ್ಲಡ್ಕ ಹಾಲು ಉತ್ಪಾದಕರ ಸಂಘ ಹಾಗೂ ಅಂಗನವಾಡಿ ಪರಿಸರದಲ್ಲಿ ಕಸ ಬಲ್ಲೆ ಗಳಿಂದ ಕೂಡಿದ್ದು,ವಿಪರೀತ ಮಳೆಗೆ ಚರಂಡಿಯಲ್ಲಿ ಪ್ಲಾಸ್ಟಿಕ್, ಬಾಟಲಿ, ಕಸ ಶೇಖರಣೆ ಆಗಿ ನೀರು ಸರಾಗವಾಗಿ ಹರಿಯದೆ ಕೊಳಚೆ ವಾಸನೆಯಿಂದ ಪರಿಸರದಲ್ಲಿ ನಡೆದಾಡಲು ಕಷ್ಟ ಆಗುತ್ತಿರುವುದನ್ನು ಗಮನಿಸಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ, ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಾ ಶೆಟ್ಟಿ ಮೊದಲಾದವರು ಸ್ವಚ್ಛತಾ ಕಾರ್ಯದಲ್ಲಿ ಜತೆ ಗೂಡಿದರು.