ಕಲ್ಲಡ್ಕ ವಲಯದ ಶೌರ್ಯ ತಂಡದ ತಿಂಗಳ ಮಾಸಿಕ ಸಭೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ವಿಟ್ಲ ಇದರ ಕಲ್ಲಡ್ಕ ವಲಯದ ಯೋಜನೆಯ ವಿಪತ್ತು ನಿರ್ವಹಣಾ ಶೌರ್ಯ ತಂಡದ ತಿಂಗಳ ಮಾಸಿಕ ಸಭೆಯು ಯೋಜನೆಯ ಕಲ್ಲಡ್ಕ ವಲಯ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ತಂಡದ ಅಧ್ಯಕ್ಷರಾದ ಮಾಧವ ಸಾಲಿಯಾನ್ ಕುದ್ರೆಬೆಟ್ಟು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿ ಈಗಾಗಲೇ ನಮ್ಮ ಪ್ರದೇಶದಲ್ಲಿ ವಿಪರೀತ ಮಳೆ ಬರುವುದರಿಂದ ಅಲ್ಲಲ್ಲಿ ಕೆಲವು ವಿಪತ್ತುಗಳು ನಡೆಯುತ್ತಿದೆ, ವಿಪತ್ತು ನಿರ್ವಹಣೆಯಲ್ಲಿ ಭಾಗವಹಿಸುವ ಸದಸ್ಯರು ವಿಟ್ಲ ಯೋಜನಾ ಕಚೇರಿಯಲ್ಲಿ ಲಭ್ಯವಿರುವ ವಿಪತ್ತು ನಿರ್ವಹಣಾ ಸಾಮಗ್ರಿಗಳನ್ನು ಬಳಸಿಕೊಂಡು ಯಾವ ರೀತಿ ತಮ್ಮನ್ನು ತಾವು ರಕ್ಷಿಸಿ ಕೊಂಡು, ವಿಪತ್ತು ನಿರ್ವಹಣೆಯಲ್ಲಿ ಭಾಗವಹಿಸಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವಿಪತ್ತು ನಿರ್ವಹಣಾ ತಂಡದ ಸದಸ್ಯರುಗಳು, ಯೋಜನೆಯ ಕಲ್ಲಡ್ಕ ವಲಯದ 9 ಒಕ್ಕೂಟಗಳ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶೌರ್ಯ ತಂಡದ ಕಲ್ಲಡ್ಕ ವಲಯ ಸಂಯೋಜಕ ವಿದ್ಯಾ ಸ್ವಾಗತಿಸಿ,ವಂದಿಸಿದರು.