ಬಂಟ್ವಾಳ: ಏಕರೂಪ ನಾಗರಿಕ ಸಂಹಿತೆಯ ಕುರಿತು ಮಾಹಿತಿ- ಸಂವಾದ ಕಾರ್ಯಕ್ರಮ
ಬಂಟ್ವಾಳ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಬಂಟ್ವಾಳ ತಾಲೂಕು ಘಟಕ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬಂಟ್ವಾಳ ಘಟಕ ಇದರ ಜಂಟಿ ಆಶ್ರಯದಲ್ಲಿಏಕರೂಪ ನಾಗರಿಕ ಸಂಹಿತೆಯ ಕುರಿತು ಮಾಹಿತಿ- ಸಂವಾದ ಕಾರ್ಯಕ್ರಮ ಬಿ. ಸಿ. ರೋಡ್ ನ ಬ್ರಾಹ್ಮಣ ಪರಿಷತ್ ಸಭಾಭವನ ಶುಕ್ರವಾರ ಸಂಜೆ ನಡೆಯಿತು.
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು. ಮಂಗಳೂರಿನ ಹಿರಿಯ ವಕೀಲರಾದ ಪರಮೇಶ್ವರ ಜೋಯಿಷ್ ರವರು ಏಕ ರೂಪ ನಾಗರಿಕ ಸಂಹಿತೆ ಬಗ್ಗೆ ಮಾಹಿತಿ ಮತ್ತು ಸಂವಾದ ನಡೆಸಿದರು.
ಅಧಿವಕ್ತಾ ಪರಿಷತ್ ದಕ್ಷಿಣಕನ್ನಡ ಜಿಲ್ಲಾಧ್ಯಕ್ಷರಾದ ಪುಷ್ಪಲತ ಯು. ಕೆ ಅವರು ಉಪಸ್ಥಿತರಿದ್ದರು.
ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ಅಧ್ಯಕ್ಷರಾದ ಉಮಾ ಯನ್. ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನ್ಯಾಯವಾದಿ ವೀರೇಂದ್ರ ಎಂ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಮ ಪ್ರಭು ವಂದಿಸಿದರು.