ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಯನಾಡು ಒಕ್ಕೂಟದ ತ್ರೈಮಾಸಿಕ ಸಭೆ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ವಲಯದ ನಯನಾಡು ಒಕ್ಕೂಟದ ತ್ರೈಮಾಸಿಕ ಸಭೆ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಯನಾಡುನಲ್ಲಿ ನಡೆಯಿತು.
ಯೋಜನೆಯ ದ.ಕ. ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ.ವೀರೇಂದ್ರ ಹೆಗ್ಗಡೆ ಅವರದೂರದರ್ಶಿತ್ವದಿಂದ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಿಂದಾಗಿ ಹಳ್ಳಿಗಳಲ್ಲಿ ಬಡತನ ನಿವಾರಣೆಯಾಗಿದೆ.ಕೃಷಿಕರಿಗೆ ಪೂರಕವಾಗಿ ಯಂತ್ರಶ್ರೀ ಹಾಗೂ ಪ್ರಗತಿಗೆ ಪೂರಕವಾಗಿ ಸದಸ್ಯರು ಸಾಲವನ್ನು ಪಡೆಯುವ ಸಲುವಾಗಿ ಡಿಜಿಟಲ್ ಆಪ್ ನ್ನು ಬಳಸಿ ಮೊಬೈಲ್ ಮೂಲಕ ಅತೀ ಸುಲಭದಲ್ಲಿ ಸೌಲಭ್ಯವನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಯೋಜನೆಯ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪದ್ಮ ಸೋಲಾರ್ ಸಂಸ್ಥೆಯ ಪ್ರಕಾಶ್ ಅವರು ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ಇನ್ ವಾಟರ್ ಬಗ್ಗೆ ಮಾಹಿತಿ ನೀಡಿದರು.
ಪುಂಜಾಲಕಟ್ಟೆ ವಲಯ ಮೇಲ್ವಿಚಾರಕಿ ಅಶ್ವಿನಿ ಹಾಗೂ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಅಮೃತಾ ಎಸ್., ಡಿಜಿಟಲ್ ಸೇವಾಕೇಂದ್ರದ ಸಹಾಯಕಿ ದಿವ್ಯ ಹಾಗೂ ಒಕ್ಕೂಟದ ಪದಾಽಕಾರಿಗಳಾದ ವಿಶ್ವನಾಥ್, ಸುಂದರ, ರೇಷ್ಮಾ, ರವಿ, ರಮೇಶ್ ಪೂಜಾರಿ ಹಾಗೂ ಪ್ರಗತಿ ಬಂದು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಿರಿ ಸಂಘದ ಸಿದ್ದಿಕ್ ಸ್ವಾಗತಿಸಿದರು.ಮಣ್ಣೂರು ಸಂಘದ ಶಶಿಧರ್ ನಾಯ್ಕ್ ವಂದಿಸಿದರು. ಮಣ್ಣೂರು ಸಂಘದ ಕರಿಯ ಹಾಗೂ ಕುಮಂಗಿಲ ಸಂಘದ ಶಾಂತಿಅವರು ವರದಿ ವಾಚಿಸಿದರು.ಕುಮಂಗಿಲ ಸ್ವ ಸಹಾಯ ಸಂಘ ಹಾಗೂ ಮಣ್ಣೂರು ಪ್ರಗತಿ ಬಂದು ಸಂಘದವರು ಸಹಕರಿಸಿದರು.