ಅಜ್ಜಿಬೆಟ್ಟು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಜಾಗೃತಿಯಿಂದ ಸಸ್ಯ ಸಮೃದ್ಧಿ: ಯೋಜನಾಧಿಕಾರಿ ಮಾಧವ ಗೌಡ
ಬಂಟ್ವಾಳ:ಮಕ್ಕಳು ಪರಿಸರದ ಬಗ್ಗೆ ಅರಿವು ಮೂಡಿಸಿಕೊಂಡಾಗ ಅವರು ನೆಟ್ಟ ಗಿಡಗಳ ಬೆಳವಣಿಗೆ ಜೊತೆಗೆ ಪೋಷಿಸುವ ಮೂಲಕ ಶುದ್ಧ ಮತ್ತು ಸಮೃದ್ಧ ವಾತಾವರಣ ನಿರ್ಮಾಣವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಧವ ಗೌಡ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡು ಸಮೀಪದ ಅಜ್ಜಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಪರಿಸರ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆ ಪರಿಸರ ಚಿತ್ರ ಸ್ಪಧರ್ೆ ವಿಜೇತರಿಗೆ ಬಹುಮಾನ ಮತ್ತು ಹಣ್ಣಿನ ಗಿಡ ವಿತರಣೆ ನಡೆಯಿತು. ಮುಖ್ಯಶಿಕ್ಷಕಿ ಲಕ್ಷ್ಮೀ ಶುಭ ಹಾರೈಸಿದರು. ಯೋಜನೆ ವಲಯ ಮೇಲ್ವಿಚಾರಕಿ ವೇದಾವತಿ, ಸೇವಾ ಪ್ರತಿನಿಧಿ ಆಶಾಲತಾ, ವನಜಾ ಮತ್ತಿತರರು ಇದ್ದರು.