ಬಂಟ್ವಾಳ: ನೇತ್ರಾವತಿ ಸೀನಿಯರ್ ಚೇಂಬರ್ ಘಟಕ ಪದಗ್ರಹಣ
ಬಂಟ್ವಾಳ: ಪರಿಸರ ಸಂರಕ್ಷಣೆ ಜೊತೆಗೆ ಹಿರಿಯ ಜೇಸಿ ಸದಸ್ಯರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಭಾವೈಕ್ಯಕ್ಕೆ ಒತ್ತು ನೀಡುವ ಕಾಯಕದಲ್ಲಿ ಯುವಜನತೆ ತೊಡಗಿಸಿಕೊಳ್ಳಬೇಕು ಎಂದು ನೇತ್ರಾವತಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ಘಟಕ ಅಧ್ಯಕ್ಷ ಆನಮದ ಬಂಜನ್ ಹೇಳಿದ್ದಾರೆ.

ಇಲ್ಲಿನ ಬಿ.ಸಿ.ರೋಡು ಕನ್ನಡ ಭವನದಲ್ಲಿ ನೇತ್ರಾವತಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಬಂಟ್ವಾಳ ಘಟಕ ವತಿಯಿಂದ ಮಂಗಳವಾರ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೇಸಿಐ ರಾಷ್ಟ್ರೀಯ ಅಧ್ಯಕ್ಷ ಪ್ರೊ.ವಗರ್ಿಸ್ ವೈದ್ಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ಉದ್ಯಮಿ ಅಬ್ದುಲ್ ಜಲೀಲ್ ಮೋಂಟುಗೊಳಿ, ವಾಲಿಬಾಲ್ ಎಸೋಸಿಯೇಶನ್ ಜಿಲ್ಲಾಧ್ಯಕ್ಷ ಬಿ.ಎಸ್. ಸತೀಶ್ ಕುಮಾರ್ ಪುತ್ತೂರು ಶುಭ ಹಾರೈಸಿದರು.
ನೂತನ ಉಪಾಧ್ಯಕ್ಷ ಆದಿರಾಜ ಜೈನ್, ಕಾರ್ಯದಶರ್ಿ ವಕೀಲೆ ಶೈಲಜಾ ರಾಜೇಶ್, ಕೋಶಾಧಿಕಾರಿ ಸತ್ಯನಾರಾಯಣ ರಾವ್, ಜೊತೆ ಕಾರ್ಯದಶರ್ಿ ಮಲ್ಲಿಕಾ ಆಳ್ವ ಅಧಿಕಾರ ಸ್ವೀಕರಿಸಿದರು. ಸ್ಥಾಪಕಾಧ್ಯಕ್ಷ ಜಯಾನಂದ ಪೆರಾಜ, ಹಿರಿಯ ಪ್ರತಿನಿಧಿ ಬಿ. ರಾಮಚಂದ್ರ ರಾವ್ ಸಹಕರಿಸಿದರು.
ಪ್ರಮುಖರಾದ ಡಾ. ಮನೋಹರ ರೈ , ಪಿ.ಎ. ರಹೀಂ, ಪಿ. ಮಹಮ್ಮದ್, ನಾಗೇಶ್ ಬಾಳೆಹಿತ್ಲು, ರವೀಂದ್ರ ಕುಕ್ಕಾಜೆ, ಉಮೇಶ್ ಕುಮಾರ್ ವೈ., ಹರಿಶ್ಚಂದ್ರ ಆಳ್ವ , ತಾರನಾಥ ಕೊಟ್ಟಾರಿ, ಜಯಗಣೇಶ, ಸದಾಶಿವ ಡಿ. ತುಂಬೆ, ಯೋಗೀಶ್ ಬಂಗೇರ, ಶುಭಾ ಬಂಜನ್, ಸುಜಾತ ಮತ್ತಿತರರು ಇದ್ದರು.