ಪಲ್ಲಿಪಾಡಿಯಲ್ಲಿ ಅಂಗನವಾಡಿಕೇಂದ್ರದ ನೂತನ ಕಟ್ಟಡ ಉದ್ಘಾಟನೆ
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿಯಲ್ಲಿ ೧೯೯೧ ರಿಂದ ಕಾರ್ಯಚರಿಸುತ್ತಿದ್ದ ಅಂಗನವಾಡಿ ಕೇಂದ್ರವು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ. ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಜೂ.೨೧ರಂದು ಬುಧವಾರ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳಿಗೆ ಸಂಸ್ಕಾರ ನೈತಿಕ ಮೌಲ್ಯ ಶಿಕ್ಷಣದ ಕೊರತೆ ನೀಗಿಸಲು ಶಿಕ್ಷಕಿಯರ ಪಾತ್ರ ಬಹು ಮುಖ್ಯ ಅಂಗನವಾಡಿಯ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ ನೀಡಿದಾಗ ಉತ್ತಮ ಬೆಳವಣಿಗೆಯು ಆಗಲು ಸಾಧ್ಯ. ಅಂಗನವಾಡಿಯ ಹಾಸುಪಾಸಿನಲ್ಲಿ ಸ್ವಚ್ಚತೆಯನ್ನು ಕಾರ್ಯಕರ್ತೆಯರು ಕಾಪಾಡಿಕೊಂಡುಬರಬೇಕು ಎಂದರು.
ಪಲ್ಲಿಪಾಡಿ ಭಾಗದಲ್ಲಿ ಅಂಗನವಾಡಿ ಕೇಂದ್ರ ೧೯೯೧ರಲ್ಲಿ ಪ್ರಾರಂಭವಾಗಲು ಸ್ಥಳದ ಕೊರತೆ ಇದ್ದಾಗ ಇಲ್ಲಿಯ ದಿ. ನೋಣಯ್ಯ ಮೂಲ್ಯ ಅವರು ಸ್ಥಳವನ್ನು ನೀಡಿ ಅಂಗನವಾಡಿ ಕೇಂದ್ರ ನಿರ್ಮಿಸಲು ಸಹಕರಿಸಿದರು. ಇದೀಗ ಸುಸಜ್ಜಿತವಾದ ನೂತನ ಅಂಗನವಾಡಿ ಕೇಂದ್ರವು ನಿರ್ಮಾಣಗೊಳ್ಳಲು ಹಲವರ ಪ್ರೋತ್ಸಾಹ ಹಾಗೂ ಶ್ರಮವಿದೆ.
ಅಂಗನವಾಡಿಯಲ್ಲಿ ಸಿಗುವಂತಹ ಸವಲತ್ತುಗಳನ್ನು ಪಕ್ಷತೀತವಾಗಿ ಪಡೆಯುವಂತಾಗಬೇಕು. ಗ್ರಾಮ ಪಂಚಾಯತ್ ವತಿಯಿಂದ ಸಿಗುವಂತಹ ಸಹಕಾರ ನೀಡುವುದಾಗಿ ಕರಿಯಂಗಳ ಗ್ರಾ. ಪಂ. ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಹೇಳಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಶೀಲಾವತಿ ಅಂಗನವಾಡಿಯಲ್ಲಿ ಸಿಗುವಂತಹ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಅಬುಬಕ್ಕರ್ ಅಮ್ಮುಂಜೆಯವರನ್ನು ಗೌರವಿಸಲಾಯಿತು. ಕರಿಯಂಗಳ ಗ್ರಾ.ಪಂ.ಅಧಿಕಾರಿ ಮಾಲಿನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಮೇಲ್ವಚಾರಕಿ ಸುಜಾತ, ಕರಿಯಂಗಳ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಆಚಾರ್ಯ, ಮಜೀದ್ ಧಾರಿಮಿ, ಗ್ರಾ. ಪಂ. ಸದಸ್ಯರು , ಅಂಗನವಾಡಿ ಶಿಕ್ಷಕಿಯರು ,ಕಾರ್ಯಕರ್ತೆಯರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಮಿಥಿಲ ದೀಪಾಕ್ ಸ್ವಾಗತಿಸಿ, ಸುಜಾತ ವಂದಿಸಿದರು. ಕಿಶೋರ್ ಪಲ್ಲಿಪಾಡಿ ನಿರೂಪಿಸಿದರು.