ವಾಮಂಜೂರು `ಅಣಬೆ ಉತ್ಪಾದನಾ ಘಟಕ
ವಿರುದ್ಧ ಹೋರಾಟ ಸಮಿತಿ’ ತುರ್ತು ಸಭೆ
ಕೈಕಂಬ : ದುರ್ವಾಸನೆಯಿಂದ ವಿವಾದಕ್ಕೀಡಾಗಿದ್ದ ವಾಮಂಜೂರಿನ ವೈಟ್‌ಗ್ರೋ ಎಗ್ರಿ ಎಲ್‌ಎಲ್‌ಪಿ ಅಣಬೆ ಉತ್ಪಾದನಾ ಘಟಕದ ವಿರುದ್ಧ ರಚಿಸಲಾದ ಹೋರಾಟ ಸಮಿತಿಯ ತುರ್ತು ಸಭೆ ವಾಮಂಜೂರಿನ(ಮೂಡುಶೆಡ್ಡೆ) ಓಂಕಾರನಗರದಲ್ಲಿ ಶನಿವಾರ ನಡೆಯಿತು.ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಅಣಬೆ ಉತ್ಪಾದನಾ ಘಟಕ ಸ್ಥಗಿತಗೊಳಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ರವಿ ಕುಮಾರ್ ಅವರು ಆದೇಶ ಹೊರಡಿಸಿದ್ದರು.
ಇದೀಗ ರವಿ ಕುಮಾರ್ ವರ್ಗಾವಣೆ ಹೊಂದಿದ್ದು, ಹೊಸದಾಗಿ ನಿಯುಕ್ತಿಗೊಂಡ ಜಿಲ್ಲಾಧಿಕಾರಿ ಮುಲ್ಲೆÊ ಮುಗಿಲನ್ ಅವರಿಗೆ ಅಣಬೆ ಉತ್ಪಾದನಾ ಘಟಕದ ವಸ್ತುಸ್ಥಿತಿ ಮತ್ತು ಸ್ಥಗಿತ ಆದೇಶದ ಬಗ್ಗೆ ಮನವರಿಕೆ ಮಾಡಿಕೊಳ್ಳುವ ದೆಸೆಯಲ್ಲಿ ಅವರನ್ನು ಭೇಟಿಯಾಗುವ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಹೇಳಿದರು.
ಅಣಬೆ ಉತ್ಪಾನಾ ಘಟಕ ಸ್ಥಗಿತದ ಬಳಿಕ ಡೀಸಿ ಆದೇಶ ಉಲ್ಲಂಘಿಸಿ ಘಟಕದೊಳಗೆ ಪ್ರವೇಶಿಸಲು ಯತ್ನಿಸಿದ ಸರಕು ಹೊತ್ತಿದ್ದ ಕೆಲವು ಲಾರಿಗಳನ್ನು ಹೋರಾಟ ಸಮಿತಿ ಸದಸ್ಯರು ತಡೆದು ಡೀಸಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಕಳೆದ ೧೫ ದಿನಗಳಿಂದ ಘಟಕ ಸಂಪರ್ಕಿಸುವ ರಸ್ತೆಗಳಲ್ಲಿ ಸಮಿತಿಯ ಸದಸ್ಯರು ನಿರಂತರ(ಅಹೋರಾತ್ರಿ) ಘಟಕದ ಮೇಲೆ ನಿಗಾ ಇರಿಸಿದ್ದಾರೆ.
ಹೋರಾಟ ಸಮಿತಿ ಕಾರ್ಯದರ್ಶಿ ಲಕ್ಷ್ಮಣ ಶೆಟ್ಟಿಗಾರ ಸ್ವಾಗತಿಸಿದರು. ಗೌರವಾಧ್ಯಕ್ಷ ಜಗದೀಶ ಶೇಣವ, ಸ್ಥಳೀಯ ಮುಖಂಡರಾದ ರಿಯಾಝ್ ವಾಮಂಜೂರು, ವಿಕ್ಟರ್ ಸ್ಟ್ಯಾನಿ ಕುಟಿನ್ಹೋ, ರಾಜೇಶ್ ಕೊಟ್ಟಾರಿ, ಜಯರಾಮ ಕೊಟ್ಟಾರಿ, ಜಯಂತಿ ಪೂಜಾರಿ ಕೆಲರೈಕೋಡಿ, ಅನಿಲ್ ರೈ, ಹರಿಪ್ರಸಾದ ಆಳ್ವ, ರಘು ಸಾಲ್ಯಾನ್, ಡಾ. ಕಾರ್ತಿಕ್ ರೈ, ಪದ್ಮನಾಭ ಆಳ್ವ, ನಾಗೇಶ್ ಕೋಟ್ಯಾನ್, ರಾಜಕುಮಾರ್ ಶೆಟ್ಟಿ, ಕ್ಯಾರೊನ್ ಡಿ’ಸೋಜ, ಬಾಲಕೃಷ್ಣ, ಶೇಖರ ಪೂಜಾರಿ, ಕರ್ಮಿನಾ ಲೋಬೊ, ನಾಗೇಶ್ ಕೊಟ್ಟಾರಿ, ಅಬ್ದುಲ್ ರಜಾಕ್, ಹೇಮಾ ಕುಲಾಲ್, ಜಯಪ್ರಭಾ ಕುಲಾಲ್, ಇಂತಿಯಾಝ್, ಅಮರ್ ಆಳ್ವ, ನಿಶಾ ಶೆಟ್ಟಿ, ಕಾವ್ಯಾ, ಜಾಕಬ್ ಜಕಾರಿಯಾ, ನಿಶಾ ಶೆಟ್ಟಿ, ಅಶೋಕ್ ಶೆಟ್ಟಿ, ರವಿ ಓಂಕಾರನಗರ, ಶಹಜ್, ಸ್ಮಿತಾ ಓಂಕಾರನಗರ, ಶ್ರೀನಿವಾಸ ಮಲ್ಲೂರು, ಬಾಲಕೃಷ್ಣ, ಮೋಹನದಾಸ್ ಶೆಟ್ಟಿ, ಮೋಹನದಾಸ್, ಜನಾರ್ದನ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.