ಕಲಾವಿದರಿಗೆ ಕಲೆ ಯಾವತ್ತೂ ಕೈಬಿಡುವುದಿಲ್ಲ : ಯಕ್ಷಗುರು ಅಶ್ವಥ್ ಕುಲಾಲ್ ಮಂಜನಾಡಿ
ಬಂಟ್ವಾಳ : ಯಾವುದೇ ಕಲೆಗೆ ಶ್ರಮಪಟ್ಟು ನಿರಂತರ ಅಭ್ಯಾಸ ಮಾಡಿದರೆ ಯಾರೂ ಒಳ್ಳೆಯ ಕಲಾವಿದರಾಗಬಹುದು. ಯಕ್ಷಗಾನದಲ್ಲಿ ಅಭ್ಯಾಸ ಮಾಡಿದಷ್ಡು ಕಲಿಯಲಿರುತ್ತದೆ. ಎಷ್ಟು ಕಲಿತರೂ ಮುಗಿಲಿಕ್ಕಿಲ್ಲ, ಈಗ ಯಕ್ಷಗಾನ ಕಲಾವಿದರಿಗೆ ತುಂಬಾ ವೇದಿಕೆಗಳು ನಿರ್ಮಾಣವಾಗಿದೆ ಎಂದು ಕಟೀಲು ಮೇಳದ ಕಲಾವಿದ ಯಕ್ಷಗುರು ಅಶ್ವಥ್ ಕುಲಾಲ್ ಮಂಜನಾಡಿ ತಿಳಿಸಿದರು.
ಅವರು ಆದಿತ್ಯವಾರ ಬಿ.ಸಿ.ರೋಡಿನ ಕುಲಾಲ ಸಮುದಾಯದಲ್ಲಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ನಡೆದ ಯಕ್ಷನಾಟ್ಯ ಕಲಿಕಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ ಕುಲಾಲ ಸಮುದಾಯದಲ್ಲಿ ಯಕ್ಷಗಾನ ಕಲಾವಿದರ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಪ್ರತೀ ಮನೆಯಲ್ಲೂ ಒಳ್ಳೆಯ ಯಕ್ಷಗಾನ ಕಲಾವಿದರು ಮೂಡಿಬರಲಿ ಎಂದು ತಿಳಿಸಿದರು.
ವೇದಿಕೆಯಲ್ಲಿ ಕುಲಾಲ ಸೇವಾದಳಪತಿ ಯಾದವ ಅಗ್ರಬೈಲು, ಕಾರ್ಯದರ್ಶಿ ಗಣೇಶ್ ಕುಲಾಲ್ ಬೆದ್ರಗುಡ್ಡೆ, ಕಿಶೋರ್ ಕುಲಾಲ್ ರಾಜೀವಪಳಿಕೆ ಉಪಸ್ಥಿತರಿದ್ದರು.
ರಾಜೇಶ್ ಕುಲಾಲ್ ರಾಯಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಂತ್ ಅಗ್ರಬೈಲು ಧನ್ಯವಾದ ನೀಡಿದರು. ತಾರನಾಥ ಮೊಡಂಕಾಪು, ದೇವದಾಸ ಅಗ್ರಬೈಲು, ದರ್ಶನ್ ಮೊಡಂಕಾಪು, ಚಿರಾಗ್ ಮಯ್ಯರಬೈಲು, ರಾಜೇಶ್ ಭಂಡಾರಿಬೆಟ್ಟು, ರಾಘವೇಂದ್ರ ಮೈರಾನ್ಪಾದೆ ಕಾರ್ಯಕ್ರಮಕ್ಕೆ ಸಹಕರಿಸಿದ್ದರು. ಸಭಾಕಾರ್ಯಕ್ರಮದ ನಂತರ ಸುಮಾರು ನಲುವತ್ತು ವಿದ್ಯಾರ್ಥಿಗಳು ನಾಟ್ಯ ಕಲಿಕೆಗೆ ಸೇರ್ಪಡೆಗೊಂಡರು.