Published On: Mon, Jun 19th, 2023

ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯ:ಡಾ. ನರಸಿಂಹ ಪೈ

ಕೈಕಂಬ: ಬದುಕಿನಲ್ಲಿ ವಿದ್ಯಾರ್ಥಿಗಳಿಗೆ ಒಳ್ಳೆಯ ವಿಚಾರಗಳನ್ನು ತಿಳಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತೀ ಮುಖ್ಯವಾಗಿದೆ. ಸರಕಾರಿ ಶಾಲೆಗಳಿಗೆ ಆಧಾರ ಬಳಗದಂತಹ ಟ್ರಸ್ಟ್ ಗಳ ಸಹಕಾರ ಶಾಲೆಯ ಬೆಳವಣಿಗೆಗೆ ಸಹಕಾರಿ ಎಂದು ಡಾ. ನರಸಿಂಹ ಪೈ ಹೇಳಿದರು. ಅವರು ಸೋಮವಾರ ಆಧಾರ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ದ.ಕ.ಜಿ.ಪಂ.ಪ್ರಾಥಮಿಕ ಶಾಲೆ, ಮತ್ತು ಸರಕಾರಿ ಪ್ರೌಢಶಾಲೆ ಗುರುಪುರ , ಇಲ್ಲಿ ಆಯೋಜಿಸಿದ ಜ್ಞಾನಾಧಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಾವು ನಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಮಕ್ಕಳು ಕಷ್ಟವನ್ನು ಅರಿಯುತ್ತಾರೆ ಮತ್ತು ಸಮಾಜದಲ್ಲಿ ಉತ್ತಮವಾಗಿ ಬೆರೆಯಲು ಕಲಿಯುತ್ತಾರೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇವತ್ತು ಆಧಾರ ಬಳಗ ನಡೆಸಿದ ಕಾರ್ಯಕ್ರಮ ಮಕ್ಕಳಿಗೆ ಪ್ರೇರಣೆಯಾಗುವಂತದ್ದು. ಎಳವೆಯಲ್ಲಿ ಮಕ್ಕಳಿಗೆ ಸರಿಯಾದ ಮೌಲ್ಯಯುತ ಶಿಕ್ಷಣ ದೊರೆತಾಗ ಉತ್ತಮ ಸಮಾಜ ದೇಶದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯ ಪಟ್ಟರು .

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಹಾಗೂ ಬ್ಯಾಂಡ್ ಸೆಟ್ ಅನ್ನು ಆಧಾರ ಟ್ರಸ್ಟ್ನ ವತಿಯಿಂದ ಹಸ್ತಾಂತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ. ಲ ಚಂದ್ರಹಾಸ ಶೆಟ್ಟಿ, ಉದ್ಯಮಿ ದೇರಳಕಟ್ಟೆ ಇವರು ಮಾತನಾಡಿ ಆಧಾರ ಬಳಗಕ್ಕೆ ದೇಶದ ಕತ್ತಲೆಗಳನ್ನು ನಿವಾರಿಸುವ ಪ್ರಯತ್ನ ಶ್ಲಾಘನೀಯ. ಮಕ್ಕಳನ್ನು ಅತ್ಯುತ್ತಮ ಪ್ರಜೆಗಳನ್ನಾಗಿ ಮಾಡಲು ಶಿಕ್ಷಕರು,ಹೆತ್ತವರು,ಸಮಾಜ ಮುಖ್ಯ ಕಾರಣವಾಗುತ್ತದೆ. ನಾವುಗಳು ಯಾವತ್ತು ಮಾನಸಿಕವಾಗಿ ದುರ್ಬಲರಾಗಬಾರದು ಮಾನಸಿಕವಾಗಿ ನಾವು ಪ್ರಬಲವಾಗಿ ಬೆಳೆದಾಗ ಸಾಧಿಸಲು ಸುಲಭವಾಗುತ್ತದೆ. ಇಲ್ಲಿನ ಎಲ್ಲಾ ಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ತಲುಪುವಂತವರಾಗಲಿ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತ ಆಳ್ವ, ಅಧ್ಯಕ್ಷರು ಕಾಲೇಜು ಅಭಿವೃದ್ಧಿ ಸಮಿತಿ, ಸರಕಾರಿ ಪದವಿಪೂರ್ವ ಕಾಲೇಜು ಗುರುಪುರ ಇವರು ವಹಿಸಿದ್ದರು.ಮಕ್ಕಳಿಗೆ ವಿಶೇಷವಾಗಿ ಸ್ಪರ್ಧೆಗಳನ್ನು ಆಯೋಜಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕೆ.ಎಂ.ಸಿ ಕಾರ್ಡಿಯೋಲಜಿ ವಿಭಾಗ ಮುಖ್ಯಸ್ಥರಾದ ಡಾ. ನರಸಿಂಹ ಪೈ, ಗುರುಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಯಶವಂತ ಶೆಟ್ಟಿ, ಸದಸ್ಯರುಗಳಾದ ಉದಯ್ ಭಟ್, ರಾಜೇಶ್, ಸುವರ್ಣ, ಸುನಿಲ್, ಪ್ರೌಡಶಾಲಾ ಮುಖ್ಯೋಪಾಧ್ಯಾಯರಾದ . ಬಾಬು ಪಿ.ಎಲ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಶ್ರೀ ಆಳ್ವ, ಆಧಾರ ಟ್ರಸ್ಟಿನ ಅಧ್ಯಕ್ಷರಾದ ನಿತೇಶ್ ಅಡ್ಡೂರು, ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು, ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ ರಾಷ್ಟ್ರಗೀತೆ ಹಾಡಿದರು, ಸಿಂಚನ ಕಾರ್ಯಕ್ರಮದ ಕುರಿತು ತನ್ನ ಅನುಭವವನ್ನು ಹಂಚಿಕೊAಡರು, ಟ್ರಸ್ಟಿನ ಸದಸ್ಯರಾದ ಗುರುಕೃಷ್ಣ ಸ್ವಾಗತಿಸಿದರು, ವಿಜೇತ್ ಯು.ಎಸ್ ವಂದಿಸಿದರು, ಬಹುಮಾನ ವಿತರಣೆಯನ್ನು ಟ್ರಸ್ಟಿನ ಉಪಾಧ್ಯಕ್ಷರಾದ ರಾಜೇಶ್ ನರಿಂಗಾನ ಇವರು ನಡೆಸಿಕೊಟ್ಟರು . ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಕುಡುಪು ಕಾರ್ಯಕ್ರಮವನ್ನು ನಿರ್ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು..

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ವರ್ಗ, ವಿದ್ಯಾರ್ಥಿಗಳ ಹೆತ್ತವರು, ಆಧಾರ ಟ್ರಸ್ಟಿನ ಸದಸ್ಯರು, ಶಾಲೆಯ ಹಿತೈಷಿಗಳು, ಸ್ಥಳೀಯ ನಾಗರೀಕರು ಭಾಗವಹಿಸಿದ್ದರು..

ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಕುಡುಪು ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter