ಸರಕಾರಿ ಪ್ರೌಢ ಶಾಲೆ ಕೊಡಂಗೆ ವಿಶ್ವ ಪರಿಸರ ದಿನಾಚರಣೆ
ಸರಕಾರಿ ಪ್ರೌಢ ಶಾಲೆ ಕೊಡಂಗೆ ಇಲ್ಲಿ ಜೂ.5ರಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ, ಇಕೋ ಕ್ಲಬ್ ನ ನೋಡಲ್ ಶಿಕ್ಷಕಿಯಾಗಿರುವ ಸುಮನಾ ಇವರ ನೇತೃತ್ವದಲ್ಲಿ ಪ್ರತಿಜ್ಞಾವಿಧಿಯನ್ನು ಹೇಳುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ರೋಟರಿ ಕ್ಲಬ್ ಮೊಡಂಕಾಪು ಇದರ ಕಾರ್ಯದರ್ಶಿಯಾಗಿರುವ ಪಿ. ಎ ರಹೀಂ, ದ. ಕ. ಜಿ. ಪಂ ಉಪನಿರ್ದೇಶಕರ ಕಛೇರಿಯಿಂದ ಆಗಮಿಸಿರುವ ಗಣಿತ ವಿಷಯ ಪರಿವೀಕ್ಷಣಾಧಿಕಾರಿಯಾಗಿರುವ ಶೋಭಾ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿರುವ ಇಸ್ಮಾಯಿಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿರುವ ಹುಸೇನ್,ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗಿಡಗಳನ್ನು ನೆಡಲಾಯಿತು.
ಮುಖ್ಯೋಪಾಧ್ಯಾಯರಾದ ಸುಧೀರ್ ಜಿ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕರಾಗಿರುವ ಅಶೋಕ್ ಕುಮಾರ್ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು. ಪರಿಸರ ಗೀತೆ ಯನ್ನು ಹಾಡುವುದರ ಮೂಲಕ ವಿಶೇಷವಾದ ಮೆರುಗನ್ನು ತಂದುಕೊಡುವುದರೊಂದಿಗೆ ಜಿಲ್ಲಾ ಗ್ರಾಹಕ ಕ್ಲಬ್ ನ ಅಧ್ಯಕ್ಷರಾಗಿರುವ ಹಿಂದಿ ಭಾಷಾ ಶಿಕ್ಷಕಿಯಾಗಿರುವ ಗೀತಾ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.