ಪೊಳಲಿ ಕಲ್ಕುಟ ಕುಳ ಕೆರೆಯ ಹೊಳೆತ್ತುವ ಕಾರ್ಯಕ್ರಮ
ಪೊಳಲಿ: ಶ್ರೀ ಕ್ಷೇ ಧ.ಗ್ರಾ.ಯೋ.ಬಿ.ಸಿ ಟ್ರೆಸ್ಟ್ (ರಿ) ಬಂಟ್ವಾಳದ ವತಿಯಿಂದ ಪೊಳಲಿಯ ಕಲ್ಕುಟ ಕುಳ ಕೆರೆಯ ಹೊಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಅವರು ಮಂಗಳವಾರ ನೆರವೇರಿಸಿದರು .

ಶ್ರೀ. ಕ್ಷೇತ್ರ ಧ. ಯೋಜಯವರು ಹಲಾವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಜನರು ಇದರ ಪ್ರಯೋಜನವನ್ನು ಪಡೆದು ಕೊಳ್ಳಬೇಕು ಕೆರೆಯ ಅಭಿವೃದ್ಧಿಯಿಂದ ಈ ಬಾಗದ ಎಲ್ಲಾ ರೈತರಿಗೂ ಉಪಯೋಗವಾಗಲೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ನಿರ್ದೆಶಕರಾದ ಮಹಬಲ ಕುಲಾಲ್, ತಾಲೂಕು ಯೋಜನಾಧಿಕಾರಿ ಮಾಧವ ಗೌಡ,ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ, ಕರಿಯಂಗಳ ಗ್ರಾ.ಪಂ. ಪಿಡಿಓಮಾಲಿನಿ, ಪೊಳಲಿ ಶ್ರೀ ರಾಹಜರಾಜೇಶ್ವರೀ ದೇವಸ್ಥಾನದ ಅಛ್ಕ ಪದ್ಮನಾಭ ಬಟ್, ನಮ್ಮೂರು ನಮ್ಮ ಕೆರೆ ಸಮಿತಿಯ ಅಧ್ಯಕ್ಷ ಜನಾರ್ಧನ ಆಚಾರ್ಯ , ಪೊಳಲಿ ವೆಂಕಟೇಶ್ ನಾವಡ, ಗ್ರಾ. ಪಂ. ಉಪಾಧ್ಯಕ್ಷೆ ವೀಣಾ ಆಚಾರ್ಯ ಹಾಗೂ ಗ್ರಾ. ಪಂ. ಸದಸ್ಯರು, ನಮ್ಮೂರು ನಮ್ಮ ಕೆರೆಯ ಸದಸ್ಯರು, ಯೋಜನೆಯ ಕಾರ್ಯಕರ್ತರು ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ನಿಧೇಶಕರಾದ ಮಹಬಲ ಕುಲಾಲ್ ಕಾರ್ಯಕ್ರಮದ ಉದ್ಧೇಶ ಅದರ ಉಪಯೋಗ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ಮೇZಲ್ವಿಮೇಲ್ವಿಚರಕರಾದ ಹರಿನಾಕ್ಷಿ ಸ್ವಾಗತಿಸಿದರು. ಸೇವಾ ಪ್ರತಿನಿಧಿ ರೇಖಾ ಶೆಟ್ಟಿ, ವಂದಿಸಿದರು.