ಬಂಟ್ವಾಳ:ಇಲ್ಲಿನ  ಪಲ್ಲಮಜಲು ಮತ್ತು ಅರಳದಲ್ಲಿ ಮಾರಾಟಕ್ಕೆ ಅವಕಾಶವಿಲ್ಲದ ಸಿಮೆಂಟು ಚೀಲವನ್ನು ಪತ್ತೆ ಹಚ್ಚಿರುವ ಪ್ರಕರಣವನ್ನು ಬಂಟ್ವಾಳ ತಹಶೀಲ್ದಾರರು  ಗಂಭೀರವಾಗಿ ಪರಿಗಣಿಸಿ  ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ಜಾಲವನ್ನು ಬಯಲಿಗೆಳೆಯಬೇಕು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ರಾಜೀವ್  ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಒತ್ತಾಯಿಸಿದ್ದಾರೆ.


ಬುಧವಾರ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪ್ರಕರಣವನ್ನು ರಾಜಕೀಯ ಒತ್ತಡಕ್ಕೆ ಮಣಿದು ಅಧಿಕಾರಿಗಳು ಮುಚ್ಚಿಹಾಕಲು ಯತ್ನಿಸದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆ.ಅರ್.ಡಿ.ಎಲ್.ಸಂಸ್ಥೆಗೆ ಸೇರಿದ ಕೇವಲ ಸರಕಾರಿ ಕಟ್ಟಡ,ರಸ್ತೆ ಇನ್ನಿತರ ಕಾಮಗಾರಿಗಳಿಗಷ್ಠೆ ಉಪಯೋಗಿಸಬಹುದಾದ ಈ ಸಿಮೆಂಟ್ ಚೀಲಗಳು ಬಿಜೆಪಿ ಪ್ರಮುಖರೋರ್ವರ ಮನೆಯಲ್ಲಿ ಹೇಗೆ ದಾಸ್ತಾನಿಡಲಾಗಿದೆ.ಅಧಿಕಾರಿಗಳು ದಾಳಿ ನಡೆಸಿ ಸಿಮೆಂಟನ್ನು ಪತ್ತೆ ಹಚ್ಚಿ ವಶಪಡಿಸಿದ್ದು,ಅಲ್ಲಿದ್ದ ಸಿಮೆಂಟಿನ ಖಾಲಿ ಚೀಲಗಳನ್ನು ಬೆಂಕಿ ಹಚ್ಚಿ ಸುಡಲಾಗಿದೆ ಎಂದು ಅವರು ಆರೋಪಿಸಿದರು.  


ಪಲ್ಲಮಜಿಲಿನಲ್ಲಿ ಸಿಮೆಂಟ್ ಚೀಲ ಪತ್ತೆಯಾದ ಪ್ರಕರಣ ತನಿಖೆಗೆ ಪುರಸಭೆಯ ಮುಖ್ಯಾಧಿಕಾರಿಯವರಿಗೆ ವಹಿಸಲಾಗಿದ್ದು,ಅರಳದಲ್ಲಿ ಸಿಮೆಂಟ್ ಚೀಲ ಪತ್ತೆಯಾದ ಪ್ರಕರಣವನ್ನು ಸ್ಥಳೀಯ ಗ್ರಾ.ಪಂ.ಪಿಡಿಒ ಅವರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದರೂ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ನೀಡುತ್ತಿಲ್ಲ, ಈ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು

ಅಧಿಕಾರಿಗಳು ಸೂಕ್ತವಾದ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪ್ರಮುಖರಾದ ಸುರೇಶ್ ಜೊರಾ, ಪದ್ಮನಾಭ ಸಾಮಂತ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *