ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಯವರಿಗೆ ನುಡಿ ನಮನ
ಬಂಟ್ವಾಳ: ಫರಂಗಿಪೇಟಿಯ ವಿಜಯನಗರ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ ವತಿಯಿಂದ ಪರಂಗಿಪೇಟೆ ವೀರಾಂಜನೇಯ ವ್ಯಾಯಾಮ ಶಾಲಾ ವಠಾರದಲ್ಲಿ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಣ್ ಕಾಂತಪ್ಪ ಶೆಟ್ಟಿ ಅವರಿಗೆ ನುಡಿ ನಮನ ಕಾರ್ಯಕ್ರಮ ನಡೆಯಿತು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ನುಡಿನಮನ ಸಲ್ಲಿಸಿದರು.
ಮನಸ್ವಿನಿ ಆಸ್ಪತ್ರೆಯ ಡಾ. ರವೀಶ್ ತುಂಗಾ , ಅರ್ಕುಳ ಕಂಪ ಸದಾನಂದ ಆಳ್ವ ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾದ ಸುಜೀರು ಗುತ್ತು ಐತಪ್ಪ ಆಳ್ವ , ಕಾರ್ಯಾಧ್ಯಕ್ಷ ಮಹಾಬಲ ಕೊಟ್ಟಾರಿ , ಬೆಸೆಂಟ್ ಕಾಲೇಜು ನ ಎನ್. ಎಸ್. ಎಸ್ ಮುಖ್ಯಸ್ಥರಾದ ರವಿಪ್ರಭ ರವರು ಕೊಡ್ಮಣ್ ಕಾಂತಪ್ಪ ಶೆಟ್ಟಿ ಅವರೊಂದಿಗಿನ ತಮ್ಮ ಒಡನಾಟದ ಅನುಭಗಳನ್ನು ನೆನಪಿಸಿದರು
ನೂರಾರು ಅಭಿಮಾನಿಗಳು ಕೊಡ್ಮಣ್ ಕಾಂತಪ್ಪ ಶೆಟ್ಟಿ ಯವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಗೈದರು
ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿ, ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ ಸ್ವಾಗತಿಸಿದರು.