ಮಂಗ್ಲಿಮಾರ್: ವಾರ್ಷಿಕ ನೇಮೋತ್ಸವ ಗಡಿ ಪ್ರಧಾನ ಕಾರ್ಯಕ್ರಮ
ಬಂಟ್ವಾಳ:ಇಲ್ಲಿನ ಅಮ್ಟಾಡಿ ಗ್ರಾಮದ ಕಾರಣಿಕ ಪ್ರಸಿದ್ಧ ಮಂಗ್ಲಿಮಾರ್ ಅಣ್ಣಪ್ಪ ಸ್ವಾಮಿ ದೈವಸ್ಥಾನದಲ್ಲಿ ಧೂಮಾವತಿ ಬಂಟ ಸಹಿತ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಗುರುವಾರ ಸಮಾಪನಗೊಂಡಿತು. ಮಂಗಳವಾರ ಧ್ವಜಾರೋಹಣ ಮೂಲಕ ಆರಂಭಗೊಂಡ ವಾರ್ಷಿಕ ನೇಮೋತ್ಸವದಲ್ಲಿ ಬಡಾಜೆಗುತ್ತು ರವಿಶಂಕರ ಶೆಟ್ಟಿ ಅವರಿಗೆ ಗಡಿಪ್ರದಾನ ನೆರವೇರಿಸಲಾಯಿತು.

ಶುಕ್ರವಾರ ಸಂಜೆ ಗಂಟೆ ೬ಕ್ಕೆ ಕಲಾಯಿ ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಮಹಾಪೂಜೆ, ಶ್ರೀ ಮಹಾಮ್ಮಾಯಿ ದೇವರಿಗೆ ಮಾರಿಪೂಜೆ ನಡೆಯಿತು.