ಗೋಳಿದಡಿಗುತ್ತಿನ ಮನೆಯಲ್ಲಿ ನಾಲ್ವರು ವೈದ್ಯರಿಗೆ ಸನ್ಮಾನ
ಕೈಕಂಬ : ಅತ್ಯುನ್ನತ ದರ್ಜೆಯಲ್ಲಿ ಎಂಬಿಬಿಎಸ್ ಪದವಿ ಪೂರೈಸಿದ ಗುರುಪುರ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಮತ್ತು ಉಷಾ ವರ್ದಮಾನ ಶೆಟ್ಟಿ ದಂಪತಿಯ ಪ್ರಥಮ ಪುತ್ರಿ ಡಾ. ಸಮನಾ ಶೆಟ್ಟಿ ಅವರಿಗೆ ಗೋಳಿದಡಿಗುತ್ತಿನ ಚಾವಡಿ ಮಿತ್ರರು ಶುಕ್ರವಾರ ಸಂಜೆ ಗುತ್ತಿನ ಮನೆಯಲ್ಲಿ ಸನ್ಮಾನ ಕೂಟ ಏರ್ಪಡಿಸಿದ್ದರು.

ಡಾ. ಸಮನಾ ಅವರೊಂದಿಗೆ ಎಜೆ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ಸಹಪಾಠಿಗಳಾಗಿದ್ದ ಡಾ. ಸಚಿನ್ ಗಟ್ಟಿ, ಡಾ. ತಾನ್ಯಾ ಮಹೇಶ್ ಮತ್ತು ಡಾ. ಸನಬೆಲ್ ಡಿ’ಸೋಜ ಅವರನ್ನೂ ಸನ್ಮಾನಿಸಲಾಯಿತು.

ಸುನೀಲಾ ಎ. ಸ್ವಾಗತಿಸಿದರು. ಸತೀಶ್ ಶೆಟ್ಟಿ ಬೆಳ್ಳಿಬೆಟ್ಟುಗುತ್ತು, ದೀಪಾ ಎನ್. ಶೆಟ್ಟಿ, ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಡಾ. ಸಮನಾ ಮತ್ತು ಡಾ. ಗಟ್ಟಿ ಮಾತನಾಡಿದರು. ಸಮಾರಂಭದಲ್ಲಿ ಗೋಳಿದಡಿಗುತ್ತಿನ ಚಾವಡಿ ಮಿತ್ರರು, ಗುತ್ತಿನ ಯಜಮಾನರು, ಹಿತೈಷಿಗಳು ಉಪಸ್ಥಿತರಿದ್ದರು.