ಬೊಳ್ಳೂರ ಮಾಡ್ಲಾಯ ದೈವದ ನೇಮೋತ್ಸವ
ಕೈಕಂಬ: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವದ ಹಾಗೂ ಭೂತರಾಜ ದೈವದ ನೇಮೋತ್ಸವವು ಎ.೧೫ರಂದು ಶನಿವಾರ ನಡೆಯಿತು. ಬೆಳಗ್ಗ ಬೆಳ್ಳೂರು ಗುತ್ತಿನಿಂದ ಭಂಡಾರ ಆಗಮಿಸಿ ಧ್ವಜರೋಹಣಗೊಂಡ ಬಳಿಕ ಬಳಿಕ ನೇಮೋತ್ಸವ ನಡೆಯಿತು.
ಏಳು ಗುತ್ತಿನ ಯಜಮಾನರು ಹಾಗೂ ಆಡಳಿತ ಮಂಡಳಿಯವರ ಉಪಸ್ಥಿತಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ, ನರೇಂದ್ರ ಭಂಡಾರಿ, ಸಚ್ಚಿಂದ್ರನಾಥ ಭಂಡಾರಿ,ಮೋಹನ ಮೇಲಾಂಟ,ಉಮೇಶ್ ಶೆೆಟ್ಟಿ ಪರಿಮೊಗರು, ರಘು ಎಲ್ ಶೆಟ್ಟಿ, ಗಂಗಾಧರ ಪೂಜಾರಿ ಕೊಪ್ಪಳ,ನಂದರಾಮ ರೈ,ಸೀತಾರಾಮ ಪೂಂಜ, ದೇವಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.