ಬಡಕಬೈಲು ಮೀಯಾಳ ವಾಮನ ಪೂಜಾರಿ ನಿಧನ.
ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಮೀಯಾಳ ವಾಮನ ಪೂಜಾರಿ ( 84) ಅಲ್ಪ ಕಾಲದ ಅಸೌಖ್ಯದಿಂದ ಬುಧವಾರ ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು.
ಶ್ರೀಯುತರು ಹಿರಿಯ ಕೃಷಿಕರಾಗಿ ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತರಾಗಿದ್ದರು, ಪೊಳಲಿ ಯಕ್ಷಗಾನ ಸಂಘದ ಸದಸ್ಯರಾಗಿದ್ದರು. ಯಕ್ಷಕಲಾ ರಂಗದಲ್ಲಿ ಹವ್ಯಾಸಿ ಕಲಾವಿದರಾಗಿಯು ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು,ಸೊಸೆಯಂದಿರನ್ನು ಮತ್ತು ಇಬ್ಬರು ಪುತ್ರಿಯರು ಅಳಿಯಂದಿರನ್ನು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮೀಯಾಳ ಗಂಪತೋಟದ ಮನೆಯಲ್ಲಿ ನಡೆಯಿತು.