ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೋಳಿ ಗುಂಟ
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ೧೮ನೇ ದಿನದವರೇಗೆ ಮಾಂಸಹಾರ ಸೇವನೆ ಮಾಡುವುದು ನಿಷಿದ್ದ ಏ. ೧ರಂದು ಶನಿವಾರ ಕೊಳಿಗುಂಟ ನಡೆದ ಬಳಿಕ ಮಾಂಸಾಹಾರ ಸೇವನೆಯನ್ನು ಮಾಡಬಹುದು ಎಂಬ ಪ್ರತೀತಿ ಇದೆ. ದೇವರಲ್ಲಿ ಪ್ರಾರ್ಥಿಸಿದ ಬಳಿಕ ಕೊಂಬು ವಾಧ್ಯದೊಂದಿಗೆ ಕೋಳಿಗುಂಟದ ಗದ್ದೆಗೆ ಗುತ್ತಿನವರು ತಂತ್ರಿಗಳು.ಅರ್ಚಕರು ತೆರಳಿದ ಬಳಿಕ ನಟ್ಟಿಲ್ ಮನೆತನದವರು ಎರಡು ಕೊಳಿಗಳನ್ನು ಕೊಳಿಗುಂಟದ ಗದ್ದೆಯಲ್ಲಿ ಎರಡು ಕೋಳಿಗಳನ್ನು ನಾಲ್ಕು ಗುಂಟದಲ್ಲಿ ಕಟ್ಟಿ ಕೋಳಿಗಳನ್ನು ಹಾರಿಸಿ (ಕೋಳಿ ಕಟ್ಟ) ದ ಹಾಗೆ ಹಾರಿಸಿ ತೆಗೆಯತ್ತಾರೆ.
ನಂತರ ದೇವರ ಪ್ರಸಾದವನ್ನು ಅರ್ಚಕರು ನೀಡುತ್ತಾರೆ. ಶ್ರೀ ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯ ತಂತ್ರಿ ,ಪ್ರಧಾನ ಅರ್ಚಕರಾದ ಮಾಧವ ಭಟ್, ಪರಮೇಶ್ವರ ಭಟ್, ಮಾಧವ ಮಯ್ಯ, ವಿಷ್ಣುಮೂರ್ತಿ ನಟ್ಟೋಜ, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಚೇರ ಸೂರ್ಯನಾರಾಯಣರಾವ್ ,ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ನಟ್ಟಿಲ್ ಮನೆತನದವರು, ಗುತ್ತಿನವರು, ಭಕ್ತಾಧಿಗಳು ಉಪಸ್ಥಿತರಿರುವರು.