ಜಾರಂದಗುಡ್ಡೆ: ಲಕ್ಷ್ಮೀ ವಿಷ್ಣು ಸೇವಾ ಸಂಘ ಹಾಗೂ ಮಾತೃ ಮಂಡಳಿ ಇದರ ವಾರ್ಷಿಕೋತ್ಸವ ಸಮಾರಂಭ.
ನೀತಿ ವ್ಯಾಮೋಹ ದಿಂದ ಸಮಾಜ ಕಟ್ಟೋಣ:ಮಾಣಿಲ ಶ್ರೀ.
ಬಂಟ್ವಾಳ :ಸಂಘಟನೆಗಳು ಸಮಾಜದ ಕಷ್ಟ ದುಃಖಗಳಿಗೆ ಸ್ಪಂದಿಸಬೇಕು, ಮದ್ಯ, ಡ್ರಗ್ಸ್ ಮುಂತಾದ ಮಾದಕ ವ್ಯಾಸನಗಳಿಗೆ ಯುವ ಜನಾಂಗವು ಬಲಿಯಾಗಬಾರದು ಪುಣ್ಯ ಪ್ರಾಪ್ತಿಗಾಗಿ ನಾವೆಲ್ಲರೂ ಸತ್ಕಾರ್ಮಗಳು ಮಾಡೋಣ,ಜಾತಿ ವ್ಯಾಮೋಹವನ್ನು ಬಿಟ್ಟು,ನೀತಿ ವ್ಯಾಮೋಹದಿಂದ ಶಾಂತಿಯುತ ಸಮಾಜ ಕಟ್ಟೋಣ, ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯ ಪ್ರವೃತ್ರರಾಗೋಣ,ಲಕ್ಶ್ಮಿ ವಿಷ್ಣು ಸೇವಾ ಸಂಘದ ಸಾಮಾಜಿಕ ಸೇವಾ ಚಟುವಟಿಕೆಗಳು ನಿರಂತರವಾಗಿ ನಡೆಯಲಿ ಎಂದು ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಆವರು ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಜಾರಂದಗುಡ್ಡೆ:ಲಕ್ಷ್ಮೀ ವಿಷ್ಣು ಸೇವಾ ಸಂಘ(ರಿ )ಹಾಗೂ ಲಕ್ಷ್ಮೀ ವಿಷ್ಣು ಸೇವಾ ಮಾತೃ ಮಂಡಳಿ(ರಿ )ಇದರ ದ್ವಿತೀಯ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಯುವ ವಾಗ್ಮಿ ಶ್ರೀದೇವಿ ಪುತ್ತೂರು ದಿಕ್ಸುಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ,ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಪೊನ್ನೊಡಿ,ರಂಗ ಕಲಾವಿದ ಸದಾಶಿವ ಡಿ ತುಂಬೆ, ಹಿಂ ಜಾ ವೇ ಪುತ್ತೂರು ಜಿಲ್ಲಾ ಸಂಚಾಲಕರಾದ ಜಗದೀಶ ಹೊಳ್ಳರಬೈಲು,ಯುವ ಉದ್ಯಮಿ ಸುಪ್ರೀತ್ ಆಳ್ವ, ಸಮಾಜ ಸೇವಕ,ಖ್ಯಾತ ಜ್ಯೋತಿಷ್ಯರಾದ ಅನಿಲ್ ಪಂಡಿತ್, ಕಳ್ಳಿಗೆ ಗ್ರಾ ಪಂ ಅಧ್ಯಕ್ಷರಾದ ಯಶೋಧ ದಯಾನಂದ,,ಸಮಾಜ ಸೇವಕಿ ಶಶಿಪ್ರಭಾ ಗುತ್ತಹಿತ್ತಿಲು, ನಿವೃತ್ತ ಸೈನಿಕರಾದ ಡಿಕೆಶ್ ಕೋಟ್ಯಾನ್ ಮುಂಡಾಜೆ, ಕಳ್ಳಿಗೆ ಗ್ರಾ ಪಂ ಸದಸ್ಯರಾದ ಮನೋಜ್ ವಳವೂರು, ಮಾಜಿ ಗ್ರಾ ಪಂ ಸದಸ್ಯರಾದ ರೇವತಿ ಮಾಡಂಗೆ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಶುಭ ಆನಂದ್ ಬಂಜನ್, ಲಕ್ಷ್ಮೀ ವಿಷ್ಣು ಸೇವಾ ಸಂಘದ ಅಧ್ಯಕ್ಷರಾದ ಗಿರೀಶ್ ರಕ್ಷಿತಾ ಜಾರಂದಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾಧಕರಾದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಪೊನ್ನೊಡಿ ಹಾಗೂ ನಿವೃತ್ತ ಸೈನಿಕರಾದ ಡಿಕೆಶ್ ಕೋಟ್ಯಾನ್ ಮುಂಡಾಜೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿದ್ಯಾರ್ಥಿಗಳಾದ ಕು.ತೃಷಾ ಕಂಜತ್ತೂರು , ಕು ಹರ್ಷ ಮಾಡಂಗೆ,ಕು.ಚೈತ್ರಾ ದಾರಿಬಾಗಿಲು, ಕು.ಹರ್ಷಿತಾ ಅರ್ಬಿಬೆಟ್ಟು ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸುಧೀರ್ ಜಾರಂದಗುಡ್ಡೆ ಸ್ವಾಗತಿಸಿ,ಅಕ್ಬರ್ ಆಲಿ ವರದಿ ವಾಚಿಸಿದರು,ಭವ್ಯ ರೂಪೇಶ್ ಧನ್ಯವಾದವಿತ್ತು, ಸುರೇಶ ನಾವೂರ ನಿರೂಪಿಸಿದರು.
ಬೆಳಿಗ್ಗೆ ಸಾಮೂಹಿಕ ಶ್ರೀ ಶನಿಪೂಜೆ ಜರುಗಿ ಮಧ್ಯಾಹ್ನ ಪ್ರಸಾದ ವಿತರಣೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ ಜರುಗಿತು. ತುಳು ಚಲನಚಿತ್ರ ಹಾಸ್ಯ ನಟ ಮಂಜು ರೈ,ಖ್ಯಾತ ಗಾಯಕರಾದ ಪ್ರಕಾಶ್ ಮಹಾದೇವನ್ ಹಾಗೂ ರೂಪ ಪ್ರಕಾಶ್ ಮಹಾದೇವನ್ ರವರಿಂದ ಸಂಗೀತ ರಸ ಸಂಜೆ, ಡ್ಯಾನ್ಸ್,ಇಂಡಿಯಾ ಡ್ಯಾನ್ಸ್ ಖ್ಯಾತಿಯ ತಂಡದಿಂದ ಡ್ಯಾನ್ಸ್ ಹಾಗೂ ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ ಇವರ “ಆರ್ ಪನ್ಲೆಕ” ಎಂಬ ತುಳು ಹಾಸ್ಯಮಯ ನಾಟಕ ಜನಮನ ರಂಜಿಸಿತು