Published On: Thu, Mar 9th, 2023

ತ್ರಿಪುರಾ ಮತ್ತು ನಾಗಲ್ಯಾಂಡ್ ಗಳಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ : ಬಂಟ್ವಾಳದಲ್ಲಿ ಸಂಭ್ರಮಾಚರಣೆ

ಬಂಟ್ವಾಳ: ಈಶಾನ್ಯ ರಾಜ್ಯಗಳಾದ ತ್ರಿಪುರಾ ಮತ್ತು  ನಾಗಲ್ಯಾಂಡ್ ಗಳಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ, ಬಂಟ್ವಾಳ ಮಂಡಲದ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಜಯಘೋಷದೊಂದಿಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ  ಸಂಭ್ರಮಿಸಿದರು.

ಈ ಸಂದರ್ಭ  ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ  ಡೊಂಬಯ ಅರಳ,  ಪದಾಧಿಕಾರಿಗಳಾದ ಚಂದ್ರಾವತಿ ಪೊಳಲಿ,ಚಿದಾನಂದ ರೈ, ರಮಾನಾಥ ರಾಯಿ, ಹರ್ಷಿಣಿ ಪುಷ್ಪಾನಂದ , ಜಿಲ್ಲಾ ಯುವಮೋರ್ಚಾ ಪ್ರಧಾನ  ಕಾರ್ಯದರ್ಶಿ ಸುದರ್ಶನ್ ಬಜ, ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ  ಸರ್ಮಿತ್ ಜೈನ್, ಕ್ಷೇತ್ರದ ವಿವಿಧ ಮೋರ್ಚಾದ ಅಧ್ಯಕ್ಷರುಗಳಾದ ಆನಂದ ಎ. ಶಂಭೂರು,ಕಿಶೋರು ಪಲ್ಲಿಪಾಡಿ  ಹಾಗೂ ಪ್ರಮುಖರಾದ ಯಶೋಧರ ಕರ್ಬೆಟ್ಟು ಅಶ್ವಥ್  ರಾವ್, ಶುಭಾಕರ ಶೆಟ್ಟಿ , ಅಜಿತ್ ಶೆಟ್ಟಿ ,ಸುರೇಶ್ ಮೈರಾ, ಗೋಪಾಲ ಬಂಗೇರ, ರವಿಂದ್ರ ಶೆಟ್ಟಿ,  ರವಿ ಅಂಚನ್ ,ಪುಷ್ಪಾನಂದ, ಉಮೇಶ್ ಪೂಜಾರಿ ,ವಿಧ್ಯಾದರ ರೈ, ಪುರುಷೋತ್ತಮ ಟೈಲರ್ , ಮೋಹನದಾಸ ಕೊಟ್ಟಾರಿ ,ಸಂತೋಷ್ ಶಂಭೂರು, ಶರತ್ ಶೆಟ್ಟಿ , ನವೀನ ಅಯೋಧ್ಯ ಮುಂತಾದವರು ಉಪಸ್ಥಿತರಿದ್ದರು .

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter