ತುಂಬೆ ವಲಯ ಪ್ರಗತಿಬಂದು ಸ್ವ – ಸಹಾಯ ಸಂಘಗಳ ಸಾಧನಾ ಸಮಾವೇಶ
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್( ರಿ), ಪ್ರಗತಿಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ತುಂಬೆ ವಲಯ ಇದರ ಪ್ರಗತಿಬಂದು ಸ್ವ – ಸಹಾಯ ಸಂಘಗಳ ಸಾಧನಾ ಸಮಾವೇಶ ಸೋಮವಾರ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ
ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ,ಗ್ರಾಮಾಭಿವೃದ್ಧಿ ಯೋಜನೆ ವಿಶ್ವಾಸದ ಮೇಲಿನಂತಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ಮೇಲಿನ ವಿಶ್ವಾಸದಿಂದ ಬಹಳಷ್ಟು ಜನ ಯೋಜನೆಯನ್ನು ಸ್ವೀಕರಿಸಿದ್ದಾರೆ, ಅಭಿವೃದ್ಧಿಗಾಗಿ ಸಂಘದ ಅಗತ್ಯವಿದೆ ಎಂದರು.
ಯೋಜನೆಯ ತುಂಬೆ ವಲಯ ಅಧ್ಯಕ್ಷರಾದ ಲೀಡಿಯಾ ಪಿಂಟೋ ಅವರು ಅಧ್ಯಕ್ಷತೆ ವಹಿಸಿದ್ದರು.ಇದೇ ವೇಲಕೆ ತುಂಬೆ ವಲಯಕ್ಕೆ ಸಂಬಂಧಪಟ್ಟ 7 ಒಕ್ಕೂಟಗಳ ಉತ್ತಮ ತಂಡಗಳನ್ನು ಗುರುತಿಸಿ ಸನ್ಮಾನಿಸಲಾಯಿತು ಹಾಗೂ ಸಾಧಕ ಸದಸ್ಯರನ್ನು ಗೌರವಿಸಲಾಯಿತಲ್ಲದೆ ಯೋಜನೆಯ ಸಂಪೂರ್ಣ ಸುರಕ್ಷಾ ಸೌಲಭ್ಯದ ಚೆಕ್ ವಿತರಿಸಲಾಯಿತು.
ಫರಂಗಿಪೇಟೆ ಸೇವಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೆ ಕೃಷ್ಣಕುಮಾರ್ ಪೂಂಜ, ಯೋಜನೆಯ ಜಿಲ್ಲಾನಿರ್ದೇಶಕರಾದ ಸತೀಶ್ ಶೆಟ್ಟಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಸದಸ್ಯ ಐತಪ್ಪ ಅಳ್ವ ಸುಜೀರ್ ಗುತ್ತು, ಜ್ಯೋತಿಷಿ ಅನಿಲ್ ಪಂಡಿತ್ ಬ್ರಹ್ಮರ ಕೋಟ್ಲು, ಸಮಾಜ ಸೇವಕಿ ವಸಂತಿ ಲೋಕನಾಥ್ ಶೆಟ್ಟಿ ಬಿ.ಸಿ. ರೋಡ್, ಕಳ್ಳಿಗೆ ಒಕ್ಕೂಟದ ಅಧ್ಯಕ್ಷ ಜಯಂತ್, ನರಿಕೊಂಬು ‘ಎ’ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪಸಪಲ್ಯ , ನಂದಾವರ ಒಕ್ಕೂಟದ ಅಧ್ಯಕ್ಷ ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.
ನರಿಕೊಂಬು ‘ಎ’ ಒಕ್ಕೂಟ ಸೇವಾ ಪ್ರತಿನಿಧಿ ಕುಸುಮಾವತಿ ಸ್ವಾಗತಿಸಿ ದರು, ಪರಂಗಿಪೇಟೆ ಒಕ್ಕೂಟಸೇವಾ ಪ್ರತಿನಿಧಿ ಅಮಿತಾ ಸಾಧನಾ ವರದಿ ವಾಚಿಸಿದರು. ಪರಂಗಿಪೇಟೆ ಒಕ್ಕೂಟ ಅಧ್ಯಕ್ಷ ಸುಕೇಶ್ ಶೆಟ್ಟಿ ವಂದಿಸಿದರು.ತುಂಬೆ ವಲಯ ಮೇಲ್ವಿಚಾರಕಿ ಮಮತ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು ಸೇವಾಪ್ರತಿನಿಧಿಗಳಾದ ಪ್ರತಿಭಾ, ಮಲ್ಲಿಕಾ, ಅನಿತಾ, ಸಹಕರಿಸಿದರು.