ಊಟದ ತಟ್ಟೆ ತೊಳೆಯುವ ವಿಚಾರದಲ್ಲಿ ಕೊಲೆಯಲ್ಲಿ ಅಂತ್ಯ
ಬಜಪೆ:ಊಟದ ತಟ್ಟೆ ತೊಳೆಯುವ ವಿಚಾರದಲ್ಲಿ ಉತ್ತರ ಭಾರತ ಮೂಲದ ಇಬ್ಬರ ನಡುವೆ ಪರಸ್ಪರ ಗಲಾಟೆ ನಡೆದು ಓರ್ವ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮರವೂರು ಗ್ರಾಮದ ಕೊಸ್ಟಲ್ ಗಾರ್ಡ್ ಸೈಟ್ ಬಳಿ ನಡೆದಿದೆ. ಸಂಜಯ್ ಘಟನೆಯಲ್ಲಿ ಸಾವನ್ನಪ್ಪಿದವನು.ಘಟನೆ ನಡೆದ ಬಳಿಕ ಆರೋಪಿ ಉತ್ತರ ಪ್ರದೇಶದ ಬಸೈ ಕುರ್ದ್ ನಿವಾಸಿ ಸೋಹನ್ (19)ಎಂಬಾತ ಪರಾರಿಯಾಗಿದ್ದನು.
ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕ ರಾದ ಸಂಜಯ್ ಹಾಗೂ ಸೋಹಾನ್ ಯಾದವ್ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಸೋಹನ್ ಯಾದವ್ ಎಂಬಾತ ಸಂಜಯ್ ಎಂಬಾತನನ್ನು ಬಲವಾಗಿ ನೆಲಕ್ಕೆ ದೂಡಿದ ಪರಿಣಾಮ ಸಂಜಯ್ ನೆಲಕ್ಕೆ ಬಿದ್ದು ತಲೆಗೆ ಗಂಭೀರವಾದ ಗಾಯಗಳಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು,ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದುತಿಳಿದುಬಂದಿದೆ.
ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿ ಸೋಹನ್ ಯಾದವ್ ನನ್ನು ಮಂಗಳವಾರದಂದು ಮಧ್ಯಾಹ್ನ ಮಂಗಳೂರು ರೈಲ್ವೇ ನಿಲ್ದಾಣದ ಬಳಿ ಬಜಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.