Published On: Sun, Mar 5th, 2023

ಶಾಸಕ ರಾಜೇಶ್ ನಾಯ್ಕ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂಭ್ರಮದ” ಸ್ನೇಹ ಸಂಗಮ “

ಬಂಟ್ವಾಳ : ಶಿಕ್ಷಣ, ಉದ್ಯೋಗ, ವ್ಯಾಪಾರ ಹಾಗೂ ಇನ್ನಿತರ ಉದ್ದೇಶದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಬಂಟ್ವಾಳ ಕ್ಷೇತ್ರದ ಬಂಧುಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ “ಸ್ನೇಹ ಸಂಗಮ” ಎಂಬ ಅಪರೂಪದ ಕಾರ್ಯಕ್ರಮ ಬೆಂಗಳೂರಿನ ಜಯಮಹಲ್ ಪ್ಯಾಲೇಸ್ ನಲ್ಲಿ  ಭಾನುವಾರ ಮಧ್ಯಾಹ್ನದಿಂದ ರಾತ್ರಿವರೆಗೆ  ನಡೆಯಿತು.

ನಾಯಕರಿಂದ ನೆಮ್ಮದಿಯ ಬಂಟ್ವಾಳ: ಪೂಜಾರಿ

ವಿಟ್ಲ ಕ್ಷೇತ್ರದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಶಾಸಕ ರಾಜೇಶ್ ನಾಯ್ಕ್  ಅವರ ನಾಯಕತ್ವದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಹಿಂದೆಂದು ಕಂಡರಿಯದ ಅಭಿವೃದ್ಧಿಯ ಹಾಗೂ ನೆಮ್ಮದಿಯ ಬಂಟ್ವಾಳ ನಿರ್ಮಾಣಗೊಂಡಿದ್ದು,ಇದು ಬಂಟ್ವಾಳದ ಮತದಾರರಿಗೆ ಧನ್ಯತೆಯ ಕ್ಷಣವಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಿಂದ ನಮ್ಮ ದೇಶದ ಗೌರವ ಹೆಚ್ಚಾಗಿದೆ. ರಾಹುಲ್ ಗಾಂಧಿ ಪರದೇಶ ಕ್ಕೆ ಹೋಗಿ ದೇಶದ ಮಾನ ಹರಾಜು ಹಾಕುತ್ತಿದ್ದಾರೆ.ಅಂತವರ ಪಕ್ಷ ಭಾರತಕ್ಕೆ ಬೇಕೇ ಎಂಬ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು.ಚುನಾವಣಾ ಕಾಲದಲ್ಲಿ ಅಪಪ್ರಚಾರ ಸಾಮಾನ್ಯ ಕಾರ್ಯಕರ್ತರು,ಮತದಾರರು ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ,ಶಾಸಕ ರಾಜೇಶ್ ನಾಯ್ಕ್ ಅವರನ್ನು ಮತ್ತೆ ಗೆಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಚಿರ ಋಣಿ: ಶಾಸಕ ನಾಯ್ಕ್ 

ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ,ಶಾಸಕನ ನೆಲೆಯಲ್ಲಿ ನನ್ನ ಕರ್ತವ್ಯವನ್ನು  ನಿಷ್ಠೆ, ಪ್ರಾಮಾಣಿಕವಾಗಿ ಮಾಡಿದ ಆತ್ಮತೃಪ್ತಿ ನನಗಿದೆ.ಕಳೆದ 10 ವರ್ಷಗಳಲ್ಲಿ ಬಂಟ್ವಾಳದ ಜನತೆ ನೀಡಿರುವ ಪ್ರೀತಿ,ವಿಶ್ವಾಸವನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಗೆಲುವಿನಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಬಂಟ್ವಾಳ ಬಂಧುಗಳ ಪಾತ್ರವು ಮಹತ್ತರವಾದುದು,ನಿಮಗು ನಾನು ಚಿರ ಋಣಿಯಾಗಿದ್ದೆನೆ ಎಂದು ಶಾಸಕರು‌ನುಡಿದರು.

ರಾಜ್ಯ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ,ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ , ಉದ್ಯಮಿಗಳಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಚಂದ್ರಹಾಸ ರೈ ಬೆಂಗಳೂರು,ವಸಂತ ಶೆಟ್ಟಿ ಉಳಿಪಾಡಿಗುತ್ತು,ರವೀಂದ್ರನಾಥ ಆಳ್ವ,ರಮೇಶ್ ಬಂಟ್ವಾಳ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ  ದೇವಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರು ತುಳುನಾಡ ಜವನೆರ್  ಅಧ್ಯಕ್ಷ ಮಹೇಶ್ ಶೆಟ್ಟಿ, ಶಾಸಕ ರಾಜೇಶ್ ನಾಯ್ಕ್ ಅವರ ಅಭಿಮಾನಿ ಬಳಗದ ಕುಮಾರ್ ಆಳ್ವ ಅವರು ಉಪಸ್ಥಿತರಿದ್ದರು. 

ಇದೇವೇಳೆ ಶಾಸಕ ರಾಜೇಶ್ ನಾಯ್ಕ್ ಅವರನ್ನು ಶಾಸಕರ ಅಭಿಮಾನಿ ಬಳಗದಿಂದ ಸನ್ಮಾನಿಸಲಾಯಿತು. ಶಾಸಕ ರಾಜೇಶ್ ನಾಯ್ಕ್ ಅವರ ಅಭಿಮಾನಿ ಬಳಗದ ಪ್ರಮುಖ ಶೃತಿನ್ ಶೆಟ್ಟಿ ಕಡೇಶ್ವಾಲ್ಯ ಸ್ವಾಗತಿಸಿದರು.ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಪ್ರಸ್ತಾವಿಸಿದರು.ಶೃತಿಕಾ ಶೆಟ್ಟಿ ಕಡೇಶ್ವಾಲ್ಯ ವಂದಿಸಿದರು.ಅವಿನಾಶ್ ಕಡೇಶ್ವಾಲ್ಯ‌ಕಾರ್ಯಕ್ರಮ ನಿರೂಪಿಸಿದರು.

ರಂಜಿಸಿದ ಹಾಸ್ಯ ,ನಾಟ್ಯ,ರಸಮಂಜರಿ

 ಗಿರೀಶ್ ರೈ ಕಕ್ಕೆಪದವು ಅವರ ಭಾಗವತಿಕೆಯಲ್ಲಿ ದಿನೇಶ್ ರೈ ಕಡಬ ಅವರ ಪ್ರಧಾನ ಹಾಸ್ಯ ,ಮಾತುಗಳೊಂದಿಗೆ ನಡೆದ ಯಕ್ಷಗಾನ,ಹಾಸ್ಯ,ನಾಟ್ಯ ವೈಭವ ಹಾಗೂ  ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ನೇತೃತ್ವದಲ್ಲಿ ಮ್ಯೂಸಿಕಲ್ ವೈಬ್ಸ್ ಜನಮನ ರಂಜಿಸಿತು.ಬೆಂಗಳೂರಿನಲ್ಲಿ ನೆಲೆಸಿರುವ ಬಂಟ್ವಾಳದ ಬಂಧುಗಳು ನಿರೀಕ್ಷೆಗೂ ಮೀರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter