ಬಂಟ್ವಾಳ: ಮೂಡೂರು-ಪಡೂರು ಕಂಬಳ ಸಮಾಪನ ಕಂಬಳ ತುಳುನಾಡಿನ ಸಂಸ್ಕೃತಿ ಪ್ರತೀಕ: ಯು.ಟಿ.ಖಾದರ್
ಬಂಟ್ವಾಳ:ತುಳುನಾಡಿನ ಮಣ್ಣಿನ ಸಂಸ್ಕೃತಿಯ ಪ್ರತೀಕವಾಗಿ ಬೆಳೆದು ಬಂದ ಕಂಬಳವನ್ನು ಸೌಹಾರ್ದತೆಗೆ ಪೂರಕವಾಗಿ ಸಂಘಟಿಸಿ ಮುನ್ನಡೆಸುತ್ತಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಚಿಂತನೆ ಅರ್ಥಪೂರ್ಣ ಎಂದು ವಿಧಾನಸಭೆ ವಿರೋಧಪಕ್ಷ ಉಪ ನಾಯಕ ಯು.ಟಿ.ಖಾದರ್ ಹೇಳಿದ್ದಾರೆ.

ಇಲ್ಲಿನ ನಾವೂರು ಗ್ರಾಮದ ಕೂಡಿಬೈಲು ಗದ್ದೆಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಭಾನುವಾರ ಸಮಾಪನಗೊಂಡ 12ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಅವು ಮಾತನಾಡಿದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಮಾಜಿ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇದೇ ವೇಳೆ ಕಂಬಳ ಕ್ಷೇತ್ರದ ವಿವಿಧ ಸಾಧಕನ್ನು ಗುಉತಿಸಿ ಸನ್ಮಾನಿಸಲಾಯಿತು. ಮಾಜಿ ಸಚಿವ ಕೆ.ವಸಂತ ಕುಮಾರ್, ಪ್ರಮುಖರಾದ ಐವನ್ ಡಿಸೋಜ, ರವಿಶಂಕರ ಶೆಟ್ಟಿ ಬಡಾಜೆಗುತ್ತು, ಅಶೋಕ್ ಕುಮಾರ್ ರೈ ಕೋಡಿಂಬಾಡಿ ಮಿಥುನ್ ರೈ, ಲುಕ್ಮಾನ್ ಬಂಟ್ವಾಳ, ಹೇಮನಾಥ ಶೆಟ್ಟಿ, ನಾರಾಯಣ ನಾಯ್ಕ್, ಶಾಹುಲ್ ಹಮೀದ್, ಧನಭಾಗ್ಯ ಆರ್.ರೈ, ಪ್ರತಿಭಾ ಕುಳಾಯಿ, ಜಗನ್ನಾಥ ಚೌಟವಕೀಲ ನಾರಾಯಣ ಪೂಜಾರಿ ಮತ್ತಿತರರು ಶುಭ ಹಾರೈಸಿದರು.

ಕಂಬಳ ಸಮಿತಿ ಸಂಚಾಲಕ ಬಿ.ಪದ್ಮಶೇಖರ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಫಿಲಿಕ್ ಫ್ರಾಂಕ್, ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಸಂಪತ್ ಕುಮಾರ್ ಶೆಟ್ಟಿ, ಉಮೇಶ ಕುಲಾಲ್ ನಾವೂರು, ಕೆ.ಪದ್ಮನಾಭ ರೈ, ಚಂದ್ರಶೇಖರ ಪೂಜಾರಿ, ಶಬೀರ್ ಸಿದ್ಧಕಟ್ಟೆ, ಜಗದೀಶ ಕೊಯಿಲ ಮತ್ತಿತರರು ಇದ್ದರು.

ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಮತ್ತು ಬೇಬಿ ಕುಂದರ್ ಕಾರ್ಯಕ್ರಮ ನಿರೂಪಿಸಿದರು.