ಮಾ.12 ರಂದು ವಿಜಯಸಂಕಲ್ಪ ಯಾತ್ರೆ
ಬಂಟ್ವಾಳ: ಬಂಟ್ವಾಳ ಬಿಜೆಪಿ ಯುವಮೋರ್ಚ್ ವತಿಯಿಂದ ಮಾ.12ರಂದು ನಡೆಯುವ ವಿಜಯಸಂಕಲ್ಪ ಯಾತ್ರೆಯ ಬ್ರಹತ್ ವಾಹನ ಜಾಥಾದ ಸ್ಟಿಕರ್ ಬಿಡುಗಡೆ ಬಿಜೆಪಿ ಕಚೇರಿ ಬಿ. ಸಿ ರೋಡ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ದೇವಪ್ಪ ಪೂಜಾರಿ,ವಿಜಯ ಸಂಕಲ್ಪ ಜಿಲ್ಲಾ ಸಂಚಾಲಕರಾದ ದೇವದಾಸ್ ಶೆಟ್ಟಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ, ಯುವಮೋರ್ಚಾ ಹಂಗಾಮಿ ಅಧ್ಯಕ್ಷರಾದ ಕಿಶೋರ್ ಪಲ್ಲಿಪ್ಪಾಡಿ, ಯುವಮೋರ್ಚಾ ಪಧಾಧಿಕಾರಿಗಳಾದ ಅಶ್ವಥ್ ರಾವ್, ಸುರೇಶ ಕೋಟ್ಯಾನ್, ಕಾರ್ತಿಕ್ ಬಲ್ಲಾಳ್,ಹೇಮಂತ್, ಅಜಿತ್ ಶೆಟ್ಟಿ ,ಶುಭಾಕರ್ ಶೆಟ್ಟಿ,ಯತಿನ್ ಶೆಟ್ಟಿ ಉಪಸ್ಥಿತರಿದ್ದರು.