ಬಂಟ್ವಾಳ: ಸರ್ಕಾರಿ ನೌಕರರ ಮುಷ್ಕರ ಬಿಸಿ
ಬಂಟ್ವಾಳ:ಇಲ್ಲಿನ ಸರ್ಕಾರಿ ನೌಕರರ ಸಂಘದ ಮುಷ್ಕರ ಕರೆಯಂತೆ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಮಂದಿ ನೌಕರರು ಮಂಗಳವಾರ ನಡೆದ ಕರ್ತವ್ಯಕ್ಕೆ ಹಾಜರಾಗದೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗಮನ ಸೆಳೆದರು.
ಬಿ.ಸಿ.ರೋಡು ಆಡಳಿತ ಸೌಧ, ತಾಲ್ಲೂಕು ಪಂಚಾಯಿತಿ, ಪುರಸಭೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಮೆಸ್ಕಾಂ, ಉಪ ನೋಂದನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಕರ್ಾರಿ ಶಾಲೆ ಸಹಿತ ಸಕರ್ಾರಿ ಆಸ್ಪತ್ರೆ ತೆರೆಯದೆ ಜನ ಸಾಮಾನ್ಯರಿಗೆ ಮುಷ್ಕರದ ಬಿಸಿ ಮುಟ್ಟಿಸಿದರು.