ಗುರುಪುರ ಪಂಚಾಯತ್‌ನ ವಾರ್ಡ್ ಸಭೆ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನ ಮೂಳೂರು ಗ್ರಾಮದ ೧ನೇ ಮತ್ತು ೨ನೇ ವಾರ್ಡ್ ಸಭೆ ಗುರುಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ಸಭಾಗೃಹದಲ್ಲಿ ಗುರುವಾರ ನಡೆಯಿತು.
ಪಂಚಾಯತ್ ಸದಸ್ಯ ಸುನಿಲ್ ಕುಮಾರ್ ಅವರು ೧ನೇ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರೆ, ಪಂಚಾಯತ್ ಸದಸ್ಯ ಜಿ. ಎಂ. ಉದಯ ಭಟ್ ಅವರು ೨ನೇ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ಅಶೋಕ್ ನಿರ್ವಹಿಸಿದ ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಕೆ. ಸದಾಶಿವ ಶೆಟ್ಟಿ, ಬಾಲಕೃಷ್ಣ ಪೂಜಾರಿ ಮತ್ತು ಶೋಭಾ ಎ. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.