ಅಡ್ಡೂರು : ಬೃಹತ್ ತಾಲೀಮ್ ಜಲ್ಸ್
ಕೈಕಂಬ : ಅಡ್ಡೂರಿನ ಫೈವ್ ಸ್ಟಾರ್ ಬಾಯ್ಸ್(ರಿ) ಮತ್ತು ಗುರುಪುರದ ಎಂಜಿಎ ತಾಲೀಮ್ ಸ್ಪೋರ್ಟ್ಸ್(ರಿ) ಇದರ ಜಂಟಿ ಆಶ್ರಯದಲ್ಲಿ ಫೆ. ೪ರಂದು ಅಡ್ಡೂರು ಅಳಕೆ ಮೈದಾನದಲ್ಲಿ ಬೃಹತ್ ತಾಲೀಮ್ ಜಲ್ಸ್ ಕಾರ್ಯಕ್ರಮ ನಡೆಯಿತು.ಬಹುಭಾಷಾ ಕವಿ ಮೊಹಮ್ಮದ್ ಬಡ್ಡೂರು ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಹಬೀಬ್ ಕಟ್ಟಪುಣಿ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿಮನೆ, ಉದ್ಯಮಿ ಅಬ್ದುಲ್ ರಜಾಕ್ ನಂದ್ಯ, ಜಿಪಂ ಮಾಜಿ ಸದಸ್ಯ ಯು. ಪಿ. ಇಬ್ರಾಹಿಂ, ಮಾಜಿ ಶಾಸಕ ಮೊಯಿದಿನ್ ಬಾವ, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಡಾ. ಸಿದ್ದಿಕ್, ಗುರುಪುರ ಪಂಚಾಯತ್ ಉಪಾಧ್ಯಕ್ಷೆ ದಿಲ್ಶಾದ್, ದ.ಕ ಜಿಲ್ಲಾ ಮದರಸ ಆಡಳಿತದ ಅಧ್ಯಕ್ಷ ಹಾಜಿ ಎಂ. ಎಚ್. ಮೈಯ್ಯದ್ದಿ, ಗುರುಪುರ ಪಂಚಾಯತ್ ಸದಸ್ಯರಾದ ಎ. ಕೆ. ರಿಯಾಝ್, ಅಶ್ರಫ್, ಮನ್ಸೂರ್, ಶಾಹಿಕ್, ಎ. ಕೆ. ಅಶ್ರಫ್, ಅಬ್ದುಲ್ ಅಝೀಝ್ ಮತ್ತಿತರರು ಉಪಸ್ಥಿತರಿದ್ದರು.
ನಾಸಿರ್ ಕನ್ಯಾನ ಕಾರ್ಯಕ್ರಮ ನಿರೂಪಿಸಿದರು. ಹಸನ್ ಅಳಕೆ ವಂದಿಸಿದರು.