ಕಾಂಜಿಲಕೋಡಿ ಕೆರೆ ಅಭಿವೃದ್ಧಿಗೆ ಗುದ್ದಲಿಪೂಜೆ
ಗುರುಪುರ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಗ್ರಾಮದ ಕಾಂಜಿಲಕೋಡಿಯಲ್ಲಿ ೫ ಲಕ್ಷ ರೂ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೆ ಶಾಸಕ ಡಾ. ಭರತ್ ಶೆಟ್ಟಿ ಶನಿವಾರ(ಫೆ. ೪) ಗುದ್ದಲಿಪೂಜೆ ನೆರವೇರಿಸಿದರು.
ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ದಿಲ್ಶಾದ್, ಸದಸ್ಯರಾದ ಸಚಿನ್ ಅಡಪ, ಸುನಿಲ್ ಪೂಜಾರಿ ಚಿಲಿಂಬಿಗುಡ್ಡೆ, ಜಿ. ಎಂ. ಉದಯ ಭಟ್, ಹರೀಶ್ ಬಳ್ಳಿ, ಶಶಿಕಲಾ, ನಳಿನಿ ಶೆಟ್ಟಿ, ಅಶ್ರಫ್, ಪಿಡಿಒ ಪಂಕಜಾ, ಕಾಯದರ್ಶಿ ಅಶೋಕ್ ಮತ್ತ ಪಕ್ಷ ಪ್ರಮುಖರಾದ ಸುಧೀರ್ ಕಾಮತ್, ಸಾದಿಕ್, ಪಕ್ಷ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.