ಪೊಳಲಿ:ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ (ರಿ)ಬೆಂಗಳೂರು ,ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶಯದಲ್ಲಿ ವಿಶ್ವ ಕಲ್ಯಾಣ ಮಹಾ ಸಂಕಲ್ಪದಲ್ಲಿ ಶ್ರೀ ವೇದಪಾರಾಯಣ,ಸಾಮೂಹಿಕ,ಅನುಷ್ಠಾನ ಜ.೩೦ರಂದು ಸೋಮವಾರ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಘಟಕದ ಪ್ರಮುಖರಾದ ವೇದಮೂರ್ತಿ ಪೊಳಲಿ ವೆಂಕಪ್ಪಯ್ಯ ಭಟ್,ಜಲ್ಲಾಧ್ಯಕ್ಷ ವೇದಮೂರ್ತಿ ಕೆ.ಕೃಷ್ಣರಾಜ ಭಟ್,ತಾಲೂಕು ಸಂಚಾಲಕ ಪೈಕ ವೆಂಕಟ್ರಮಣ ಭಟ್, ತಾಲೂಕು ಸಂಯೋಜಕ ಎಂ ಸುಬ್ರಹ್ಮಣ್ಯ ಭಟ್, ಕೆ.ವಾಸುದೇವ ಭಟ್,ಮುರಳೀಧರ ಭಟ್, ನಾಗರಾಜ್ ಭಟ್,ವಲಯ ಸಂಚಾಲಕರು, ತಾಲೂಕು ಪದಾಧಿಕಾರಿಗಳು, ರಾಜ್ಯ ಧಾರ್ಮಿಕ ಪರಿಷತ್ ಕಶಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಪೊಳಲಿ ಗಿರಿಪ್ರಕಾಶ್ ತಂತ್ರಿ ಮೊದಲಾದವರು ಭಾಗವಹಿಸಿದ್ದರು.
