ಬಿ.ಸಿ.ರೋಡಿನ ರಾಜಾರಸ್ತೆಯಲ್ಲಿ ಅದ್ದೂರಿಯ ಗ್ರಾಮವಿಕಾಸ ಯಾತ್ರೆ,ಹರಿದು ಬಂದ ಕಾರ್ಯಕರ್ತರ ದಂಡು
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ನೇತೃತ್ವದಲ್ಲಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಮಕರಸಂಕ್ರಮಣದ ದಿನದಂದು ಪೊಳಲಿ ಕ್ಷೇತ್ರದಿಂದ ಆರಂಭಗೊಂಡ 13 ದಿನಗಳ ಗ್ರಾಮ ವಿಕಾಸ ಯಾತ್ರೆಯು ಶುಕ್ರವಾರ ಸಂಜೆ ಬಿ.ಸಿರೋಡಿಗೆ ಸಮೀಪದ ಬಸ್ತಿಪಡ್ಪುವಿನ ವಿಶಾಲ ಮೈದಾನದಲ್ಲಿ ಸಂಪನ್ನಗೊಂಡಿತು.

ಇದಕ್ಕಿ ಮುನ್ನ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಪೊಳಲಿದ್ವಾರದಿಂದ ರಾಜಾರಸ್ತೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರ ವಿಕಾಸ ಯಾತ್ರೆ ಮೈದಾನಕ್ಕೆ ಸಾಗಿ ಬಂತು.ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ.ಅಣ್ಣಾಮಲೈ,ಮಾಜಿ ಶಾಕರಾದ ರುಕ್ಮಯಪೂಜಾರಿ,ಪದ್ಮನಾಭ ಕೊಟ್ಟಾರಿ,ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಯಾತ್ರೆಗೆ ಸಾಥ್ ನೀಡಿದರು.

ದಾರಿಯುದ್ದಕ್ಕು ಶಾಸಕರು,ಅಣ್ಣಾಮಲೈಯವರನ್ನು ಹಾರ,ತೂರಾಯಿ, ಮೇಲ್ಸ್ ತುವೆಯ ಮೇಲಿಂದ ಕಾರ್ಯಕರ್ತರು ಪುಷ್ಪವೃಷ್ಠಿಗೈದು ಸ್ವಾಗತಿಸಿದ್ದು ವಿಶೇಷವಾಗಿತ್ತು.ಕಲ್ಲಡ್ಕ ಶಿಲ್ಪಾ,ಬಿ.ಸಿ.ರೋಡ್ ನ ಚಿಲಿಪಿಲಿ ಗೊಂಬೆ ಕುಣಿತ, ಕೀಲು ಕುದುರೆ, ಚೆಂಡೆ,ವಿವಿಧ ವಾದ್ಯ ಗೋಷ್ಠಿ ಯಾತ್ರೆಗೆ ವಿಶೇಷ ಮೆರಗು ನೀಡಿತು.ವಿಕಾಸ ಯಾತ್ರೆಯಲ್ಲಿ ಯುವ,ಮಹಿಳಾ ಕಾರ್ಯಕರ್ತರ ತಂಡೋಪತಂಡವಾಗಿ ಉತ್ಸಾಹದಿಂದ ಭಾಗವಹಿಸಿದ್ದರು.

ಕ್ರೇನ್ ಮೂಲಕ ಬೃಹತ್ ಹಾರ:
ವಿಕಾಸಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಹಾರ ,ಕೈಕುಲಕಲು ಕಾರ್ಯಕರ್ತರು, ಅಭಿಮಾನಿಗಳು ಮುಗಿಬಿದ್ದ ಹಿನ್ನಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ,ಅಣ್ಣಾಮಲೈ ಅವರನ್ನು ತೆರೆದ ವಾಹನಗಳನ್ನು ಕರೆತರಲಾಯಿತು.
ಈ ಸಂದರ್ಭದಲ್ಲಿ ದಾರಿಯುದ್ದಕ್ಕು ಪುಪ್ಷವೃಷ್ಠಿಯಿಂದ ಸ್ವಾಗತಿಸಿದರೆ,ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಕಾರ್ಯಕರ್ತರು ಶಾಸಕ ರಾಜೇಶ್ ನಾಯ್ಕ್,ಅಣ್ಣಾಮಲೈ ಅವರಿಗೆ ಕ್ರೇನ್ ಮೂಲಕ ಬೃಹತ್ ಹಾರವನ್ನು ಹಾಕಿ ಸ್ವಾಗತಿಸಿದರು.
ವಿಕಾಸಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಂಗೀತ ನಿರ್ದೇಶಕ ಗುರುಕಿರಣ್,ಎ.ಜೆ.ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಶಾಂತ ಮಾರ್ಲ,ಉದ್ಯಮಿ ವಿವೇಕ್ ಶೆಟ್ಟಿ, ನಗ್ರಿಗುತ್ತು,ಶಾಸಕರ ಪತ್ನಿ ಉಷಾ ,ಮನೆಮಂದಿ ಸಭಾಕಾರ್ಯಕ್ರಮದಲ್ಲಿ ಹಾಜರಿದ್ದರು. ಯುವ ಕಾರ್ಯಕರ್ತರು ಅಣ್ಣಾಮಲೈ ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.