ರಾಧಾಕೃಷ್ಣ ಕುಲಾಲ್ ನಿಧನ
ಬಂಟ್ವಾಳ:ಇಲ್ಲಿನ ನರಿಕೊಂಬು ಗ್ರಾಮದ ನಾಟಿ ನಿವಾಸಿ, ಹೋಟೆಲ್ ಬಾಣಸಿಗ ರಾಧಾಕೃಷ್ಣ ಕುಲಾಲ್( 58) ಇವರು ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಇವರು ಕಳೆದ 30 ವರ್ಷಗಳಿಂದ ಬಂಟ್ವಾಳ ಹೋಟೆಲೊಂದರಲ್ಲಿ ಬಾಣಸಿಗನಾಗಿ ಗುರುತಿಸಿಕೊಂಡಿದ್ದರು.