Published On: Fri, Jan 27th, 2023

ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಇನ್ನಿಲ್ಲ.

ಕೈಕಂಬ: ಹಲಾವಾರು ದೈವ ,ದೇವಾಸ್ಥಾನಗಳ ಜೀರ್ಣೋದ್ಧಾರದಲ್ಲಿ ಕೊಡುಗೈ ದಾನಿಯಾಗಿ ದೈವೀ ಭಕ್ತರೆಂದೆ ಗುರುತಿಸಿಕೊಂಡ ಧಾರ್ಮಿಕ ಮುಂದಾಳು, ಸಾಮಾಜಿಕ ಧುರೀಣ, ಕೊಡುಗೈದಾನಿ ಪಚಿನಡ್ಕ ಕೆ.ಸೇಸಪ್ಪ ಕೋಟ್ಯಾನ್ ಅವರು ಅಲ್ಪಕಾಲದ ಅಸೌಖ್ಯದಿಂದ ಜ.26ರಂದು ನಿಧನರಾಗಿದ್ದಾರೆ.

ಇವರ ಮೃತದೇಹವನ್ನು ನಾಳೆ (ಜ. 27) ಬೆಳಗ್ಗೆ 9ರಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಮೃತರ ಸ್ವಗೃಹ ಪಚ್ಚಿನಡ್ಕದ ಶುಭ ನಿಲಯದಲ್ಲಿ ಇಡಲಾಗುತ್ತಿದ್ದು, ಮಧ್ಯಾಹ್ನ 12.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.

ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ ವೇಳೆ ಇವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಅವರು ಚಿಕಿತ್ಸೆ ಗೆ ಸ್ಪಂದಿಸಿದೆ ಸಂಜೆ ವೇಳೆ ಮೃತಪಟ್ಟಿರುತ್ತಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಶುಭ ಬೀಡಿ ಮಾಲಕ ಯಶಸ್ವಿ ಉದ್ಯಮಿ

ಬಂಟ್ವಾಳದಲ್ಲಿ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಗೆ ಪಾತ್ರವಾಗಿದ್ದ ಇವರು ಶುಭ ಬೀಡಿ, ಶುಭ ಟ್ರಾವೆಲ್ಸ್ , ಶುಭಲಕ್ಮೀ ಮದುವೆ ಹಾಲ್, ಸಹಿತ ಅನೇಕ ಉದ್ಯಮ ನಡೆಸುತ್ತಿದ್ದು, ಅನೇಕ ಕುಟುಂಬಗಳಿಗೆ ಉದ್ಯೋಗ ನೀಡಿದ ಅನ್ನದಾತರಾಗಿದ್ದರು.
ಇವರ ಮದುವೆಯಾಗಿ ಐವತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮನೆಯಲ್ಲಿ ಶುಭಯಾನ ಎಂಬ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿದ್ದರು.


25 ವರ್ಷಗಳಿಂದ ಬಿಸಿರೋಡು ಗಾಣದಪಡ್ಪು ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ ಸೇಸಪ್ಪ ಕೋಟ್ಯಾನ್‌ ಅವರು ಪತ್ನಿ ಮಗ ಭುವನೇಶ್ ಪಚ್ಚಿನಡ್ಕ ಹಾಗೂ ನಾಲ್ಕು ಹೆಣ್ಣು ಮಕ್ಕಳನ್ನುಅಳಿಯಂದಿರನ್ನು,ಸೊಸೆ ಮತ್ತು ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter