ರಾಜಕೀಯ ವ್ಯವಸ್ಥೆಯನ್ನು ಓಲೈಸದೆ ಬೋರ್ಗರೆಯುವ ಬಲಿಷ್ಠ ಶಕ್ತಿಯಾಗಿ ಬೆಳೆದರೆ ರಾಜಕೀಯ ವ್ಯವಸ್ಥೆಗೆ ಪರ್ಯಾಯ ಶಕ್ತಿಯಾಗಲು ಸಾಧ್ಯ: ಡಾ. ವೀಣಾ ಬನ್ನಂಜೆ
ಕೈಕಂಬ: ಧರ್ಮವನ್ನು ರಾಜಕೀಯ ವ್ಯವಸ್ಥೆ ರಕ್ಷಣೆ ಮಾಡುತ್ತದೆ ಎಂಬ ಭ್ರಮೆಯಲ್ಲಿ ನಾವಿದ್ದರೆ ನಮ್ಮ ಮೂರ್ಖತನ ಖಂಡಿತವಾಗಿಯೂ ಯಾವತ್ತೂ ರಾಜಕೀಯ ಧರ್ಮವನ್ನು ರಕ್ಷಿಸುವುದಿಲ್ಲ. ಯಾರಾದರೂ ಮೇಲಿನವರು ಬಂದು ಧರ್ಮವನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ . ರಾಜಕೀಯ ವ್ಯವಸ್ಥೆಯನ್ನು ಓಲೈಸದೆ ಎಲ್ಲರೂ ಒಗ್ಗಟ್ಟಾಗಿ ಬೋರ್ಗರೆಯುವ ಬಲಿಷ್ಠ ಶಕ್ತಿಯಾಗಿ ಬೆಳೆದರೆ ರಾಜಕೀಯ ವ್ಯವಸ್ಥೆಗೆ ಪರ್ಯಾಯ ಶಕ್ತಿಯಾಗಲು ಸಾಧ್ಯ ಎಂದು ಖ್ಯಾತ ಸಾಹಿತಿ,ಆಧ್ಯಾತ್ಮಿಕ ಚಿಂತಕಿ ಡಾ. ವೀಣಾ ಬನ್ನಂಜೆ ಹೇಳಿದ್ದಾರೆ.
ಅವರು ಮಂಗಳವಾರ ಗುರುಪುರ ಗೋಳಿದಡಿ ಗುತ್ತಿನ ವರ್ಷದ ಪರ್ಬ, ಗಡಿಪಟ್ಟ ಸ್ವೀಕಾರದ ೧೨ ನೇ ವರ್ಷದ ಸಂಭ್ರಮಾಚರಣೆ ಮತ್ತು ೧೨ನೇ ವರ್ಷದ ಪರ್ವೋತ್ಸವದ ಅಂಗವಾಗಿ ಗೋಳಿದಡಿ ಗುತ್ತಿನಲ್ಲಿ ಶ್ರೀ ವೈದ್ಯನಾಥೆಶ್ವರ ವೇದಿಕೆಯಲ್ಲಿ, ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿಯವರ ಶುಭಾಶೀರ್ವಾದಗಳೊಂದಿಗೆ ನಡೆದ ಗುತ್ತಿನ ವರ್ಷದ ಓಡ್ಡೋಲಗದದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ತಿಂಗಳೆ ಬೀಡಿನ ವಿಕ್ರಮಾರ್ಜುನ ಹೆಗ್ಗಡೆ ದೀಪ ಪ್ರಜ್ವಲಿಸಿ ಓಡ್ಡೋಲಗಕ್ಕೆ ಚಾಲನೆ ನೀಡಿzರು. ನಂತರ ಮಾತನಾಡಿದ ಅವರು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದಿನ ಗುತ್ತಿನ ವ್ಯವಸ್ಥೆ ಮತ್ತೆ ಬರುವುದು ಕಷ್ಟ ಸಾಧ್ಯ ಅಂದು ಗುತ್ತಿನ ಗಡಿಕಾರರು ಸತ್ಯ ನ್ಯಾಯ ನಿಷ್ಠೆಯಿಂದ ತಮ್ಮ ಕಾರ್ಯಗಳನ್ನು ಮಾಡುತ್ತಿದ್ದರು ಇದಕ್ಕೆ ಒಂದೆರಡು ಅಪವಾದವಾಗಲು ಇಲ್ಲ ಎನ್ನಲು ಸಾಧ್ಯವಿಲ್ಲ. ಇಂದು ಈ ಕೆಲಸವನ್ನು ಪಂಚಾಯತ್ ಅಧ್ಯಕ್ಷರು, ಜಿಲ್ಲಾ ಪಂಚಾಯತ್, ಮುಖ್ಯಮಂತ್ರಿಗಳು ಮಾಡುತ್ತಾರೆ ಎಲ್ಲರೂ ಸರ್ವ ಶ್ರೇಷ್ಠರಲ್ಲ ಇಲ್ಲಿಯೂ ಕುಂದು ಕೊರತೆಗಳು ಇರುತ್ತವೆ ಎಂದರು.
ಬAಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಕೊಡಿಯಾಲಗುತ್ತು Àಅಧ್ಯಕ್ಷತೆ ವಹಿಸಿ ಮಾತನಾಡಿದರು. ವರ್ಧಮಾನ ದುರ್ಗಾ ಪ್ರಸಾದ ಶೆಟ್ಟಿಯವರು ತುಳುನಾಡಿನ ಪರಂಪರೆಯ ಗುತ್ತು ವ್ಯವಸ್ಥೆಯನ್ನು ಉಳಿಸುವುದರ ಜತೆಗೆ ಜನರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಪುಣ್ಯಕಾರ್ಯವನ್ನು ನಡೆಸುತ್ತಿದ್ದಾರೆ ಎಂದರು.
ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ನಿವೃತ್ತ ಪ್ರೊಫೆಸರ್ ಡಾ.ಡಿ.ವಿ.ಕುಮಾರ ಸ್ವಾಮಿ, ಪೆರ್ಮುದೆ ಬೊಳ್ಳುಳ್ಳಿಮಾರು ಗುತ್ತಿನ ಗಡಿಕಾರ ಗುರುಪ್ರಸಾದ ಮಾಡ, ಶಿರ್ತಾಡಿ ದೊಡ್ಡಮನೆ ಗುತ್ತಿನ ಗಡಿಕಾರ ಸದಾಶಿವ ಹೆಗ್ಡೆ, ವಾಲ್ಪಾಡಿ ಗುತ್ತಿನ ಗಡಿಕಾರ ರಘುರಾಮ ಮುದ್ಯ ಪೂವಣಿ ಮುಂತಾದವರು ಮಾತನಾಡಿದರು
ಮುಖ್ಯ ಅಥಿತಿಯಾಗಿ ಕೋನಾರ್ಕ್ ರೈ ಕಾವೂರುಗುತ್ತು, ಡೈರೆಕ್ಟರ್, ರುದ್ರಂ ಡೈನಾಮಿಕ್ಸ್, ಗುಜರಾತ್.
ಕೆ. ಭಾಗ್ಯರಾಜ ಆಳ್ವ ಕಾರದೊಗರುಗುತ್ತು, ಮತ್ತು ವಸಂತ ಕುಮಾರ್ ಗಡಿಕಾರರು ಪಾಟಾಳಿ ಮನೆ ಹೆಜಮಾಡಿ, ಸದಾಶಿವ ಶೆಟ್ಟಿ ಯಾನೇ ಜಯ ಶೆಟ್ಟಿ ಗಡಿಕಾರರು, ವಿತಮೊಗರುಗುತ್ತು,
ಬಂಕಿ ನಾಯ್ಕರು ಗಡಿಕಾರರು, ಗರಡಿ ಮನೆ, ಹಳೆಯಂಗಡಿ, ರತ್ನಾಕರ ಶೆಟ್ಟಿ ಗಡಿಕಾರರು, ಮುಂಡಡ್ಕ ಗುತ್ತು, ಕೂರಿಯಾಳ,
ಗುಣಕರ ಆಳ್ವ ಯಾನ: ರಾಮ ರೈ ಗಡಿಕಾರರು, ಬೋಳಿಯಾರುಗುತ್ತು, ನಿತಿನ್ ಹೆಗ್ಡೆ ಯಾನೇ ತಿಮ್ಮ ಕಾವ ಗಡಿಕಾರರು, ಕದರಮನೆ, ಎಕ್ಕಾರು, ವೇಣುಗೋಪಾಲ ಅರಸರು ಗಡಿಕಾರರು, ಶೆಟ್ಟೆಗುತ್ತು ಮೂಡುಶೆಡ್ಡೆ, ದಿನೇಶ ಬಂಡ್ರಿಮಾಲ್ ಗಡಿಕಾರರು, ತಾಳೆಪಾಡಿಗುತ್ತು, ಕಿನ್ನಿಗೋಳಿ, ಜಗದೀಶ ಶೆಟ್ಟಿ ಯಾನೇ ಉರಿರ್ದಾಳ ಕೊರಗ ಶೆಟ್ಟಿ ಗಡಿಕಾರರು, ದೊಡ್ಡಗುತ್ತು, ಇರುವೈಲು,
ದೊಡ್ಡಣ್ಣ ಶೆಟ್ಟಿ ಗಡಿಕಾರರು, ಕವತ್ತಾರುಗುತ್ತು, ಮತ್ತು ಗೋಳಿದಡಿ ಗುತ್ತಿನ ಯಜಮಾನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಓಡ್ಡೋಲಗದ ವೇದಿಕೆಯಲ್ಲಿ ಉಪಸ್ಥಿತರಿದ್ದರು.ದೀಪಾ ನವೀನ್ ಪ್ರಾಸ್ತವಿಕ ಮಾತನಾಡಿದರು. ಅಕ್ಷತಾ ನವೀನ್ ಶೆಟ್ಟಿ ಸ್ವಾಗತಿಸಿದರು, ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿ, ವಂದಿಸಿದರು.
ಗುತ್ತುದ ವರ್ಷದ ಪರ್ಬದ ಮೊದಲ ದಿನ ಋತ್ವಿಜರಿಂದ ಶುದ್ಧ ಪುಣ್ಯಾಹ, ಮಂಗಳ ಸ್ನಾನ, ದೀಕ್ಷಧಾರಣೆ, ಅಭ್ತ್ಯುಥಾನ ಕಲಶ ಪ್ರತಿಷ್ಠೆ, ಐಕ್ಯತಾ ಜಪ ಹೋಮ, ಮೃತ್ಯುಂಜಯ ಹೋಮ ಹಾಗೂ ಸಂಜೆ ಸಂಧ್ಯಾರತಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಗುತ್ತಿನ ಪರ್ಬೊದಲ್ಲಿನ ವಿವಿಧ ರೀತಿಯ ಸರಕು ಮಳಿಗೆಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇತ್ತು. ಗ್ರಾಮೀಣ ಮಹಿಳೆಯರಿಗೆ ಮತ್ತು ಪುರುಷರಿಗೆ ಶಕ್ತಿ ಕಲ್ಲು ಎತ್ತುವ ವ್ಯವಸ್ಥೆ ಮಾಡಲಾಗಿತ್ತು.