ಶ್ರೀ ಗುರುಪುರ ವಜ್ರದೇಹಿ ಸ್ವಾಮೀಜಿಗೆ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದ ಆಮಂತ್ರಣ
ಕೈಕಂಬ: ಜೀರ್ಣೋದ್ದಾರಗೊಂಡಿರುವ ಇಲ್ಲಿನ ಇಲ್ಲಿನ ಶ್ರೀ ದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 12 ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖಾರಾನಂದ ಸ್ವಾಮೀಜಿಯವರಿಗೆ ಶುಕ್ರವಾರ ಆಮಂತ್ರಣ ಪತ್ರವನ್ನು ನೀಡಿ ಅಹ್ವಾನಿಸಲಾಯಿತು.
ಫೆಬ್ರವರಿ 7 ರಿಂದ ಮೊದಲ್ಗೊಂಡು ಫೆಬ್ರವರಿ 12 ರವರೆಗೆ ನಡೆಯುವ ಬ್ರಹ್ಮ ಕಲಶೋತ್ಸವದ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಲಿದೆ ಎಂದು ಸ್ವಾಮೀಜಿಯವರು ಹರಸಿದರು. ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೊಟ್ಟು, ಕೋಶಾಧಿಕಾರಿ ವಿನಯ ಕಾರಂತ, ಪ್ರಚಾರ ಸಮಿತಿಯ ಸಂಚಾಲಕ ಚಂದ್ರಶೇಖರ್ ತುಂಬೆಮಜಲ್, ವಿದ್ಯುತ್ ಮತ್ತು ನೀರಾವರಿ ಸೇವಾ ಸಮಿತಿಯ ಸಂಚಾಲಕ ಯಾದವ ಪೂಜಾರಿ ಬಳ್ಳಿ ಮನೆ ಕಿಲೆಂಜಾರು ಇದ್ದರು.