ಕುತ್ತಿಲ ಬ್ರಹ್ಮ ಬದರ್ಕಳ ಗರೋಡಿ ಕಾಂಕ್ರೀಟ್ ರಸ್ತೆ, ಇಂಟರ್‌ಲಾಕ್ ಹಾಸು ಉದ್ಘಾಟನೆ
ಬಂಟ್ವಾಳ : ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಶಾಸಕರ ನಿಧಿಯ 10 ಲಕ್ಷ ರೂ. ಅನುದಾನದಿಂದ ನಿರ್ಮಾಣಗೊಂಡಿರುವ ಪಿಲಾತಬೆಟ್ಟು ಗ್ರಾಮದ ಕುತ್ತಿಲ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬದರ್ಕಳ ಗರೋಡಿಯ ಕಾಂಕ್ರೀಟ್ ರಸ್ತೆ ಮತ್ತು ಅಂಗಣಕ್ಕೆ ಅಳವಡಿಸಲಾದ ಇಂಟರ್‌ಲಾಕ್‌ನ ಉದ್ಘಾಟನೆ ಕಾರ್ಯಕ್ರಮ ಜರಗಿತು.ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಉದ್ಘಾಟಿಸಿದರು.
ಗರೋಡಿಯ ಆಡಳಿತ ಸಮಿತಿಯ ಸುರೇಶ್ ಕರ್ಕೇರಾ ಕುತ್ತಿಲ, ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ನಿವೃತ್ತ ಸಿಬಂದಿ ಮಾರಪ್ಪ ಪೂಜಾರಿ, ಪ್ರಮುಖರಾದ ಶಂಕರ ಶೆಟ್ಟಿ ಬೆದ್ರಮಾರ್,ಉಮೇಶ್ ಪೂಜಾರಿ ತಿಮರಡ್ಡ, ರಮಾನಂದ ಮೂರ್ಜೆ, ಪುಷ್ಪಾನಂದ ಮೂರ್ಜೆ, ಕಾಂತಪ್ಪ ಕರ್ಕೆರಾ, ಪ್ರಭಾಕರ ಪಿ.ಎಂ., ಶಾರದಾ ನಯನಾಡು, ಯೋಗೇಂದ್ರ ಕುಮಂಗಿಲ, ಚಂದ್ರಶೇಖರ ಶೆಟ್ಟಿ ಕುಮಂಗಿಲ, ದಯಾನಂದ ಎರ್ಮೆನಾಡು, ಶುಭಕರ ಶೆಟ್ಟಿ, ಸುರೇಶ್ ಕಯ್ಯಬೆ,ಗಿರೀಶ್ ಸಾಲ್ಯಾನ್ ಹೆಗ್ಗಡೆಬೆಟ್ಟುಗುತ್ತು ಮತ್ತಿತರರು ಉಪಸ್ಥಿತರಿದ್ದರು.