ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದ 13 ದಿನಗಳ ಪಾದಯಾತಗರೆಗೆ ಪೊಳಲಿ ಕ್ಷೇತ್ರದಲ್ಲಿ ಚಾಲನೆ
ಪೊಳಲಿ: ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಶಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ಜ.26
ರವರೆಗೆ ಬಂಟ್ವಾಳ ಕ್ಷೇತ್ರದಾದ್ಯಂತ ಸಂಚರಿಸಲಿರುವ” ಗ್ರಾಮ ವಿಕಾಸ ಯಾತ್ರೆ, ಗ್ರಾಮದೆಡೆಗೆ ಶಾಸಕರ ನಡಿಗೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಠಾರದಿಂದ ಮಕರ ಸಂಕ್ರಮಣದಂದು ಶನಿವಾರ ಸಂಜೆ ಪೊಳಲಿ ಶ್ರೀ ರಾಜರಾಜೇಶ್ವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಆರಂಭಗೊಂಡಿತು.
ಇದಕ್ಕು ಮುನ್ನ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತುರವರು ಪೊಳಲಿ ಶ್ರೀ ರಾಮಕೃಷ್ಣ ತಪೋವನದ ವಿವೇಕಚೈತ್ಯಾನಂದ ಸ್ವಾಮೀಜಿ ಅವರನ್ನು ಬೇಟಿ ಮಾಡಿ ಅಶ್ರೀರ್ವಾದ ಪಡೆದರು. ಈ ಬಾರಿಯ ಪಾದಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುಜರಾತ್ ಚುನಾವಣಾ ಸಂದರ್ಭದಲ್ಲಿ ರೋಡ್ ಶೋ ಹಾಗೂ ಚುನಾವಣಾ ಪ್ರಚಾರಕ್ಕೆ ಬಳಸಿದ್ದ ತರೆದ ವಾಹನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು,ಸಂಸದ ನಳಿನ್ ಕುಮಾರ್ ಕಟೀಲು ಅವರು ಶಾಸಕ ರಾಜೇಶ್ ನಾಯ್ಕ್ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಪಕ್ಷದ ಹಿರಿಯರಾದ ಮಹಾಬಲಶೆಟ್ಟಿ ಪಲ್ಲಮಜಲು,ಪದ್ಮನಾಭ ಬಿ.ಮತ್ತಿತರರು ತೆಂಗಿನಕಾಯಿಒಡೆಯುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಪೊಳಲಿಯಿಂದ ಹೊರಟ ಮೊದಲ ದಿನದ ಪಾದಯಾತ್ರೆ ಪುಂಚಮೆ ಕರಿಯಂಗಳ, ಬಡಕಬೈಲು ,ಕಲ್ಲಗುಡ್ಡೆ, ಬಡಗಬೆಳ್ಳೂರು ಮೂಲಕ ಸಾಗಿ ರಾತ್ರಿ ತೆಂಕಬೆಳ್ಳೂರಿನ ಶ್ರೀಕಾವೇಶ್ವರ ದೇವಸ್ಥಾನದ ವಠಾರದಲ್ಲಿಸಂಪನ್ನಗೊಂಡಿತು.ಬಳಿಕ ಇಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಮೊದಲದಿನದ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ,ಗ್ರಾಮ ವಿಕಾಸ ಯಾತ್ರೆಯ ಸಂಚಾಲಕ ಬಿ.ದೇವದಾಸ ಶೆಟ್ಟಿ, ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಸುಲೋಚನ ಜಿ.ಕೆ.ಭಟ್, ತುಂಗಪ್ಪ ಬಂಗೇರ, ಅರುಣ್ ರೋಶನ್ ಡಿ.ಸೋಜ, ರಾಮ್ ದಾಸ ಬಂಟ್ವಾಳ, ಮಾಧವ ಮಾವೆ,ಸುದರ್ಶನ್ ಬಜ,
ರವೀಶ್ ಶೆಟ್ಟಿ ಕರ್ಕಳ, ಡೊಂಬಯ್ಯ ಅರಳ, ರವೀಂದ್ರ ಕಂಬಳಿ, ವೆಂಕಟೇಶ ನಾವಡ, ಯಶವಂತ ಪೊಳಲಿ, ಚಂದ್ರಾವತಿ ಕರಿಯಂಗಳ, ಕಿಶೋರ್ ಪಲ್ಲಿಪಾಡಿ, ಲೋಕೇಶ್ ಭರಣಿ, ಸುಕೇಶ್ ಚೌಟ, ವಿವೇಕ್ ಶೆಟ್ಟಿ ನಗ್ರಿಗುತ್ತು, ಡಾ. ಪ್ರಶಾಂತ್ ಮಾರ್ಲ, ಸದಾನಂದ ಶೆಟ್ಟಿ ರಂಗೋಲಿ, ದಿನೇಶ್ ಅಮ್ಟೂರು, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಪುಷ್ಪರಾಜ್ ಚೌಟ, ಗಣೇಶ್ ರೈ ಮಾಣಿ, ಚರಣ್ ಜುಮಾದಿಗುಡ್ಡೆ, ಯಶೋಧರ ಕರ್ಬೆಟ್ಟು, ಹರ್ಷಿಣಿ ಪುಷ್ಪಾನಂದ, ವಿದ್ಯಾವತಿಪ್ರಮೋದ್ ಕುಮಾರ್, ಸವಿತಾ ಶೆಟ್ಟಿ, ಲಖಿತ್ ಆರ್ ಶೆಟ್ಟಿ, ರೇಖಾ ಪೈ, ರೊನಾಲ್ಡೊ ಡಿ.ಸೋಜ, ಪ್ರಕಾಶ್ ಅಂಚನ್, ಚಿದಾನಂದ ರೈ , ಮೋಹನ್ ಪಿ.ಎಸ್.,ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ವಸಂತ ಅಣ್ಣಳಿಕೆ, ಹರೀಶ್ ಆಚಾರ್ಯ, ಆನಂದ ಎ.ಶಂಭೂರು, ಸುರೇಶ್ ಕೋಟ್ಯಾನ್, ಪ್ರಭಾಕರ್ ಪ್ರಭು, ದೇವಿಪ್ರಸಾದ್ ಕೆಲಿಂಜ, ಗೋಪಾಲ ಸುವರ್ಣ, ಕೃಷ್ಣಪ್ಪ ಪೂಜಾರಿ, ಉದಯರಾವ್ ಬಂಟ್ವಾಳ, ಸೀಮಾ ಮಾದವ, ಸುಷ್ಮಾಚರಣ್, ಆಶಾ ಪಿ.ಶೆಟ್ಟಿ, ಮೋನಪ್ಪ ದೇವಶ್ಯ, ನಳಿನ್ ಬಿ.ಶೆಟ್ಟಿ, ವಿದ್ಯಾದರ ರೈ, ನಂದರಾಮ ರೈ, ರತ್ನಕುಮಾರ್ ಚೌಟ ಸಹಿತ ಪಕ್ಷದ ಸ್ಥಳೀಯ ಪ್ರಮುಖರು,ನೂರಾರು ಸಂಖ್ಯೆಯಲ್ಲಿ ಯುವ,ಮಹಿಳಾ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಶಾಸಕರೊಂದಿಗೆ ಹೆಜ್ಜೆ ಹಾಕಿದರು.
ಸಭಾ ಕಾರ್ಯಕ್ರಮದ ಬಳಿಕ ಸಜೀಪಮುನ್ನೂರು ಗ್ರಾಮದ ಪಕ್ಷದ ಕಾರ್ಯಕರ್ತರೋರ್ವರ ಮನೆಯಲ್ಲಿ ವಾಸ್ತವ್ಯ ಹೂಡಿದರು.
ಭಾನುವಾರ ಎರಡನೇ ದಿನದ ಪಾದಯಾತ್ರೆ ನಂದಾವರ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಲಿದೆ.
ಪಾದಯಾತ್ರೆಯಲ್ಲಿನಿರತರಾಗಿರುವ ಶಾಸಕರು ಜ.26 ರವರೆಗೆ ಒಡ್ಡೂರು ಫಾಮ್೯ ನಲ್ಲಿರುವ ತಮ್ಮ ಸ್ವಂತ ನಿವಾಸಕ್ಕೆ ತೆರಳದೆ 12 ದಿನಪಕ್ಷದ ಕಾರ್ಯಕರ್ತರ ಮನೆಯಲ್ಲೇ ತಂಗಲಿದ್ದಾರೆ. ಪಾದಯಾತ್ರೆಯ ವೇಳೆ ಪಕ್ಷದ ಕಾರ್ಯಕರ್ತರು,ಸರಕಾರದ ಸವಲತ್ತುಪಡೆದ ಫಲಾನುಭವಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ವಿಶೇಷವಾಗಿ ಶಾಸಕರು ತನ್ನ ಅವಧಿಯಲ್ಲಿ ಕ್ಷೇತ್ರದಲ್ಲಾದ ವಿವಿಧ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ಪ್ರತಿ ಗ್ರಾಮದ ಜನರಿಗೆ ಎಲ್ .ಇ.ಡಿ ವಾಹನದ ಮೂಲಕ ಪ್ರಚುರಪಡಿಸಲಾಗುತ್ತಿದೆ.