ಕುಪ್ಪೆಪದವು: ದುರ್ಗೇಶ್ವರೀ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರ ಬಿಡುಗಡೆ
ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ಫೆಬ್ರವರಿ 7 ರಿಂದ ಮೊದಲ್ಗೊಂಡು ಫೆಬ್ರವರಿ 12 ರಂದು ನಡೆಯುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರ, ಭಕ್ತಿಗೀತೆ ಮತ್ತು ಇತರ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ಭಾನುವಾರ ಜರಗಿತು.

ಆಮಂತ್ರಣ ಪತ್ರ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ಮುಖ್ಯೋಪಾಧ್ಯಯ ಅಣ್ಣಯ್ಯ ಮಯ್ಯ ಬ್ರಹ್ಮ ಕಲಶಾಭಿಷೇಕದಿಂದ ಕ್ಷೇತ್ರದ ಪಾವಿತ್ರ್ಯ ಮತ್ತು ಶಕ್ತಿ ವೃದ್ಧಿಯಾಗುತ್ತದೆ ಇದರಿಂದ ಊರಿಗೆ ಒಳಿತಾಗುತ್ತದೆ, ಈ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಎರಡೂ ಬ್ರಷ್ಮ ಬ್ರಹ್ಮಕಲಶೋತ್ಸವಗಳನ್ನು ನೋಡಿದ ಭಾಗವಹಿಸಿದ ಅನುಭವ ನನಗಿದೆ ಅದರಂತೆ ಕ್ಷೇತ್ರದ ಶಕ್ತಿ ಮತ್ತು ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಎಲ್ಲರೂ ಒಂದಾಗಿ ವಿಜೃಂಭಣೆಯಿಂದ ಬ್ರಹ್ಮ ಬ್ರಹ್ಮಕಲಶೋತ್ಸವ ನಡೆಯಲಿ ಎಂದು ಹಾರೈಸಿದರು.

ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ ಮಾತನಾಡಿ ಜೀರ್ಣೋದ್ದಾರದಿಂದ ಇಂದಿನವರೆಗೂ ಭಕ್ತರು ಅಭೂತಪೂರ್ವ ಸಹಕಾರ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆದಿದ್ದು ಮುಂದಿನ ಬ್ರಹ್ಮ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಿಗೂ ಸರ್ವರ ಸಹಕಾರ ಅಗತ್ಯ ಎಂದರು.

ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ವಿನೋದ್ ಕುಮಾರ್ ಅಂಬೆಲೋಟ್ಟು ಪ್ರಾಸ್ತವಿಕವಾಗಿ ಮಾತನಾಡಿದರು.
ಶಿವರಾಜ್ ನಾರಳ ರಚಿಸಿರುವ ದುರ್ಗೇಶ್ವರೀ ದೇವಿಯ ಭಕ್ತಿಗೀತಗಳನ್ನು, ಮತ್ತು ಪ್ರಚಾರಕ್ಕಾಗಿ ಸ್ಟಿಕ್ಕರ್, ಬ್ಯಾನರ್ ಸೇರಿದಂತೆ ಇತರ ಸಾಮಗ್ರಿಗಳನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ,ಉಪ ಮ್ಯಾನೇಜಿಂಗ್ ಟ್ರಷ್ಟಿ ಪುರುಷೋತ್ತಮ್, ಕೆ. ಟ್ರಷ್ಟಿ ಉಮೇಶ್ ಅಮೀನ್ ನಾಗಂದಡಿ, ಉಪಸಮಿತಿಯ ವಿಕ್ರಂ ಭಟ್, ರಾಮಣ್ಣ ನಾಯ್ಕ್ ಕಿಲೆಂಜಾರು, ಸಂಜೀವ ಶೆಟ್ಟಿ ನಡುಗುಂಡ್ಯ, ಪ್ರಧಾನ ಅರ್ಚಕ ವೇದಮೂರ್ತಿ ಸದಾಶಿವ ಕಾರಂತ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್,ಉಪಾಧ್ಯಕ್ಷ ರಾಮಚಂದ್ರ ಸಾಲ್ಯಾನ್ ತಾಳಿಪಾಡಿ, ಕಾರ್ಯದರ್ಶಿ ಅರ್ಜುನ್ ಪಂಡಿತ್, ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಮಹಾಬಲ ಸಾಲ್ಯಾನ್, ಕೋಶಾಧಿಕಾರಿ ವಿನಯ ಕಾರಂತ, ಗಂಜಿಮಠದ ಮಂಗಳಾ ಇಲೆಕ್ಟ್ರಿಕಲ್ಸ್ ನ ಭಾಸ್ಕರ್ ಭಟ್,ಬ್ರಹ್ಮ ಬ್ರಹ್ಮಕಲಶೋತ್ಸವದ ಮಹಿಳಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಹರ್ಷಲತಾ ಉದಯ ಕಂಬಳಿ, ಮುಖಂಡರುಗಳಾದ ಶಿವರಾಮ ಕಾರಂತ, ಗಿರೀಶ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ಬ್ರಹ್ಮ ಬ್ರಹ್ಮಕಲಶೋತ್ಸವದ ಉಪಸಮಿತಿಗಳ ಸಂಚಾಲಕರು, ಕುಪ್ಪೆಪದವು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಗಳ ಸದಸ್ಯರುಗಳು, ಕಿಲೆಂಜಾರು, ಕುಲವೂರು ಮತ್ತು ಮುತ್ತೂರು ಗ್ರಾಮಗಳ ಗಣ್ಯರು, ಸಂಘಸಂಸ್ಥೆಗಳ ಪ್ರಮುಖರು, ಭಕ್ತಾದಿಗಳು, ದೇವಸ್ಥಾನದ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಉದಯಕುಮಾರ್ ಚಂದ್ರಮಜಲ್ ಸ್ವಾಗತಿಸಿದರು. ಅಶೋಕ್ ಕಟ್ಟೆಮಾರ್ ನಿರೂಪಿಸಿ ವಿನಯ ಕಾರಂತ ವಂದಿಸಿದರು.