ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನೆರವು
ಕುಪ್ಪೆಪದವು: ಜೀರ್ಣೋದ್ದಾರಗೊಂಡು ಬ್ರಹ್ಮ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿರುವ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ಕುಪ್ಪೆಪದವು ಶ್ರೀ ದುರ್ಗೆಶ್ವರೀ ದೇವಿ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಕೊಡಮಾಡಿರುವ ಮೂರು ಲಕ್ಷ ರೂಪಾಯಿ ಸಹಾಯನಿಧಿಯ ಚೆಕ್ ಅನ್ನು ಬುಧವಾರ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ದೇವಸ್ಥಾನದ ಪ್ರಮುಖರಿಗೆ ಹಸ್ತಾoತರಿಸಿದರು.

ಯೋಜನೆಯ ಮಂಗಳೂರು ತಾಲೂಕು ಯೋಜನಾಧಿಕಾರಿ ರವಿ, ದೇವಸ್ಥಾನದ ಮ್ಯಾನೇಜಿಂಗ್ ಟ್ರಷ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ, ಉಪ ಮ್ಯಾನೇಜಿಂಗ ಟ್ರಷ್ಟಿ ಪುರುಷೋತ್ತಮ್, ಕೆ. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಉಪಾಧ್ಯಕ್ಷ ರಾಮಚಂದ್ರ ಸಾಲಿಯಾನ್ ತಾಳಿಪಾಡಿ, ಬ್ರಹ್ಮ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಕಾರ್ಯದರ್ಶಿ ಮಹಾಬಲ ಸಾಲ್ಯಾನ್ ಕೊಂದರಪ್ಪು, ಮುತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಜೀರ್ಣೋದ್ದಾರ ಸಮಿತಿ ಮತ್ತು ಬ್ರಹ್ಮ ಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಎಡಪದವು ವಲಯ ಮೇಲ್ವಿಚಾರಕ ದಾನೇಶ್, ಸೇವಾ ಪ್ರತಿನಿಧಿಗಳಾದ ಕೇಶವ, ಶ್ರೀಮತಿ ಶಶಿಕಲಾ,ಜ್ಯೋತಿ ನಾಯ್ಕ್, ರಾಮಕೃಷ್ಣ ಭಜನಾ ಮಂಡಳಿಯ ಅಧ್ಯಕ್ಷ ಹರಿಚಂದ್ರ ಗೌಡ, ಚಂದ್ರಶೇಖರ ತುಂಬೆ ಮಜಲ್, ಯಾದವ ಬಳ್ಳಿ, ವಾಮನ ಪೂಜಾರಿ ಕಜೆ, ಅನಿಲ್ ಕುಮಾರ್ ಅಂಬೆಲೋಟ್ಟು, ಅಶೋಕ್ ಕಟ್ಟೆಮಾರು ಬಳಿ, ರಾಮಚಂದ್ರ ಐನ, ಶ್ರೀಮತಿ ದೀಪಾ ರಾವ್, ಶ್ರೀಮತಿ ಆಶಾ, ರಮೇಶ್ ಅಟ್ಟೆಪದವು, ಸಂತೋಷ್ ಮೊದಲಾದವರು ಹಾಜರಿದ್ದರು.