ವಾಮದಪದವು: ಬಂಟರ ಭವನಕ್ಕೆ ಶಿಲಾನ್ಯಾಸ
ಬಂಟರು ಸಮಸ್ತ ಸಮಾಜದ ಆಸ್ತಿ: ಕೊಂಡೆವೂರು ಶ್ರೀ
ಬಂಟ್ವಾಳ:ಬಂಟರು ಸಮಸ್ತ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ದೊಡ್ಡ ಶಕ್ತಿಯಾಗಿ ಸಮಸ್ತ ಸಮಾಜದ ಆಸ್ತಿಯಾಗಿದ್ದಾರೆ ಎಂದು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.ಇಲ್ಲಿನ ವಾಮದಪದವು ವಲಯ ಬಂಟರ ಸಂಘದ ವತಿಯಿಂದ ಗುರುವಾರ ನಡೆದ ರೂ.2ಕೋಟಿ ವೆಚ್ಚದ ‘ಪದವು ಬಂಟರ ಭವನಕ್ಕೆ ಶಿಲಾನ್ಯಾಸ’ ಕಾರ್ಯಕ್ರಮದಲ್ಲಿ ಅವರು ಆಎಶೀರ್ವಚನ ನೀಡಿದರು.
ಮುಂಬೈ ಹೇರಂಬ ಇಂಡಸ್ಟ್ರೀಸ್ ಸಂಸ್ಥೆ ಆಡಳಿತ ನಿರ್ದೇಶಕ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿ , ‘ಬಂಟ ಸಮುದಾಯ ಜಾಗೃತಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ‘ ನಾಯಕತ್ವ, ಕ್ರಿಯಾಶೀಲತೆ, ಸಂಘಟನೆ, ದಾನಶೀಲತೆಗೆ ಮತ್ತೊಂದು ಹೆಸರೇ ಬಂಟರು’ ಎಂದರು.
ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಬಂಜಾರ ದೀಪ ಪ್ರಜ್ವಲಿಸಿ ಶುಭ ಹಾರೈಸಿದರು.
ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸ್ಥಳದಾನಿ ಅಮ್ಮು ರೈ ಹರ್ಕಾಡಿ ದಂಪತಿಯನ್ನು ಸನ್ಮಾನಿಸಲಾಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಉದ್ಯಮಿಗಳಾದ ಶಶಿಧರ ಶೆಟ್ಟಿ ಬರೋಡಾ, ರಾಜೇಂದ್ರ ಶೆಟ್ಟಿ ಹುಬ್ಬಳ್ಳಿ, ಉಪೇಂದ್ರ ಶೆಟ್ಟಿ ಬೆಂಗಳೂರು, ವಿಶ್ವನಾಥ ಶೆಟ್ಟಿ ಕರ್ನಿರೆ, ಶಶಿಧರ ನಾಯ್ಕ ಗೋವಾ, ರಮೇಶ ಶೆಟ್ಟಿ ಗೋವಾ, ಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜೇಂದ್ರ ಪೂಜಾರಿ, ಪ್ರಮುಖರಾದ ಜಗನ್ನಾಥ ಚೌಟ ಬದಿಗುಡ್ಡೆ, ಜಯರಾಮ ಶೆಟ್ಟಿ ಬೆಳ್ತಂಗಡಿ, ಶ್ರೀಧರ ಶೆಟ್ಟಿ ಮೇಗಿನಗುತ್ತು, ಸುಧಾಕರ ಪೂಂಜ ಸುರತ್ಕಲ್, ಪ್ರವೀಣ್ ಶೆಟ್ಟಿ ಮುಂಬೈ, ಜಗನ್ನಾಥ ಶೆಟ್ಟಿ ಮುಂಬೈ, ರಮಾ ಎಸ್.ಭಂಡಾರಿ, ಶಾಲಿನಿ ಶ್ರೀಧರ್ ಶೆಟ್ಟಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ನಿಶಾಂತ್ ಆಳ್ವ, ಜಯಪ್ರಕಾಶ್ ಶೆಟ್ಟಿ ಬುಳೇರಿ, ಚೇತನಾ ರಾಮಚಂದ್ರ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಮತ್ತಿತರರು ಇದ್ದರು. ವಲಯ ಸಂಘದ ಗೌರವ ಸಲಹೆಗಾರ ಅಶೋಕ ಉಪಸ್ಥಿತರಿದ್ದರು.