ಉಡುಪಿ: ಕಾರ್ ಮೇಲೇರಿದ ಲಾರಿ – ಪ್ರಯಾಣಿಕರು ಜಸ್ಟ್ ಮಿಸ್.!
ಉಡುಪಿ: ಟ್ರ್ಯಾಕ್ ಚೇಂಜ್ ಮಾಡುವ ಸಂದರ್ಭ ಕಲ್ಲಿದ್ದಲು ಲೋಡ್ ಹೇರಿದ್ದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಹಿಂಬದಿಯಲ್ಲಿ ಟೋಲ್ ಕಟ್ಟಲು ಬರುತ್ತಿದ್ದ ಮಾರುತಿ ಝೆನ್ ಕಾರಿನ ಮೇಲೇರಿದ ಘಟನೆ ಉಡುಪಿ ಹೆಜಮಾಡಿ ಸಮೀಪದ ಟೋಲ್ ಗೇಟ್‌ನಲ್ಲಿ ನಡೆದಿದೆ.

ಮಂಗಳೂರಿನಿಂದ ಉಡುಪಿಯ ಕಡೆಗೆ ಚಲಿಸುವ ಲಾರಿ ಹಿಂಬದಿಯ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯಗಳು ಇಲ್ಲದೆ ಪಾರಾಗಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.